ಓಂಶಕ್ತಿ ಚಲಪತಿ ನೇತೃತ್ವದಲ್ಲಿ “ಮೋದಿ ಮತ್ತೊಮ್ಮೆ” ಗೋಡೆ ಬರಹಕ್ಕೆ ಚಾಲನೆ

ಕೋಲಾರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲು ‘ಮೋದಿ ಮತ್ತೊಮ್ಮೆ’ ಎಂಬ ಗೋಡೆ ಬರಹ ಅಭಿಯಾನಕ್ಕೆ ಶುಕ್ರವಾರ ನಗರದಲ್ಲಿ ಬಿಜೆಪಿ ಮುಖಂಡ ಹಾಗೂ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ  ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಓಂಶಕ್ತಿ ಚಲಪತಿ, ದೇಶದಲ್ಲಿ ಪ್ರತಿಯೊಂದು ಬೂತ್ ನಲ್ಲಿ ಕನಿಷ್ಠ ಎರಡು ಕಡೆ ಮೋದಿ ಮತ್ತೊಮ್ಮೆ ಎಂದು ಬರೆಯಲು ರಾಜ್ಯ ಮತ್ತು ಕೇಂದ್ರದಿಂದ ಸೂಚನೆಯ ಮೇರೆಗೆ ಗೋಡೆ ಬರಹ ಅಭಿಯಾನ ಆರಂಭಿಸಿದ್ದೇವೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ವಿಕಸಿತ ಭಾರತದ ಸಂಕಲ್ಪವನ್ನು ಪ್ರಧಾನಿ ಮೋದಿಯವರು ರೂಪಿಸಲು ಹೊರಟಿದ್ದಾರೆ. ಅದನ್ನು ಈಡೇರಿಸಲು ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ. ಮೋದಿ ಅವರ ಜನಪರ ಯೋಜನೆಗಳು ಜನರನ್ನು ತಲುಪುತ್ತಿವೆ. ರಾಜ್ಯದ ಜನತೆ ಕೂಡಾ ಬಿಜೆಪಿ ಮತ್ತು ಮೋದಿ ಅವರ ಮೇಲಿನ ಗೌರವದಿಂದ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಸುಭದ್ರ ಭಾರತಕ್ಕಾಗಿ ಸಮಗ್ರ ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ಮೋದಿಯವರು ಭಾರತೀಯರ ಗ್ಯಾರಂಟಿಯಾಗಿದ್ದಾರೆ. ಈ ಗೋಡೆ ಬರಹ ಅಭಿಯಾನದಿಂದ ಇಡೀ ರಾಷ್ಟ್ರದಲ್ಲಿ ಒಂದು ರೀತಿಯ ಹೊಸ ಸಂಚಲನ ಮೂಡಲಿದ್ದು, ಮುಂದಿನ ಎರಡು ತಿಂಗಳು ಬಿಜೆಪಿಯ ಕಾರ್ಯಕರ್ತರು ಹಗಲು ರಾತ್ರಿ ದುಡಿದು ಬಿಜೆಪಿಯ ಲೋಕಸಭಾ ಅಭ್ಯರ್ಥಿಯನ್ನು ಗೆಲ್ಲಿಸಿ ದೇಶದ ಹೆಮ್ಮೆಯ ನಾಯಕ ಮೋದಿಯವರನ್ನು ಮೂರನೇ ಬಾರಿ ದೇಶದ ಪ್ರಧಾನಿಯಾಗಿಸುವಲ್ಲಿ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ದಿಶಾ ಸಮಿತಿ ಸದಸ್ಯ ಸಾ.ಮಾ ಬಾಬು, ಮುಖಂಡರಾದ ನಾಮಲ್ ಮಂಜು, ಎಬಿವಿಪಿ ಶಿಲ್ಲಂಗೆರೆ ಮಹೇಶ್, ನಾಗರಾಜ್ ಮುಂತಾದವರು ಇದ್ದರು

Leave a Reply

Your email address will not be published. Required fields are marked *