ಒಳ ಮೀಸಲಾತಿ ಜಾರಿ ಮುಂದೂಡಲು ಸರ್ಕಾರ ಯಾವುದೇ ತಂತ್ರಗಾರಿಕೆ ಮಾಡದೆ, ನ್ಯಾ.ನಾಗಮೋಹನ ದಾಸ್ ಅಧ್ಯಕ್ಷತೆಯ ಏಕ ಸದಸ್ಯ ಆಯೋಗದ ವರದಿಯನ್ನ ಜಾರಿ ಮಾಡಬೇಕು, ವರದಿಯನ್ನ ಬಿಡುಗಡೆ ಮಾಡಲು ಅವಶ್ಯಕತೆ ಇಲ್ಲದಿದ್ದಲ್ಲಿ, ತುರ್ತು ಮಧ್ಯಂತರ ವರದಿಯನನ್ನ ಜಾರಿ ಮಾಡಬೇಕು ಎಂದು ಮಾದಿಗ ಸಮುದಾಯದ ಮುಖಂಡ ಎಚ್.ವೆಂಕಟೇಶ್ ದೊಡ್ಡೇರಿ ಸರ್ಕಾರವನ್ನ ಆಗ್ರಹಸಿದರು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯ ಸಂಘಟನೆಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಮಾದರಿಯಲ್ಲಿ ಶೈಕ್ಷಣಿಕರವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಶೇ.6ರಷ್ಟು ಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಸಿದರು.
ನನ್ನ ಪ್ರಕಾರ ಒಳ ಮೀಸಲಾತಿ ಜಾರಿಯಾದರೆ, ಪರಿಶಿಷ್ಟ ಜಾತಿಯಲ್ಲಿರುವ ನೂರೊಂದು ಜಾತಿಗಳಿಗೂ ಸಮನಾಗಿ ಹಂಚಿಕೆಯಾಗುವುದು. 2004ರಲ್ಲಿ ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಆರುಂಧತಿಯಾರ್ ಸಮುದಾಯಕ್ಕೆ ಶೇಕಡಾ 3 ರಷ್ಟು ಮೀಸಲಾತಿಯನ್ನ ನೀಡಲಾಗಿದೆ. ಹಾಗೆಯೇ ಕರ್ನಾಟಕ ಮಾದಿಗ ಸಮುದಾಯಕ್ಕೆ 6 ರಷ್ಟು ಮೀಸಲಾತಿ ನೀಡಿ, ಆನಂತರ ದತ್ತಾಂಶಗಳನ್ನ ತೆಗೆದು ತಿರ್ಮಾನ ಮಾಡುವಂತೆ ಹೇಳಿದರು.
ಇತಿಹಾಸವನ್ನು ನೋಡಿದಾಗ ಸರ್ಕಾರಗಳು ವ್ಯವಸ್ಥಿತವಾಗಿ ಒಳ ಮೀಸಲಾತಿಯನ್ನ ತುಳಿಯುತ್ತಲೇ ಬಂದಿದೆ. ಮಾದಿಗ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿ ಕೊಡುವಂತೆ ನಾವೆಲ್ಲಾ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡದೆ, ಕಣ್ಣೋರಿಸುವ ಕೆಲಸ ಮಾಡದೆ, ನ್ಯಾ, ನಾಗಮೋಹನ ದಾಸ್ ಆಯೋಗಕ್ಕೆ ನೀಡಿದ ಅವಧಿ ವಿಸ್ತರಣೆ ಮಾಡದೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ರಾಮಕೃಷ್ಣಪ್ಪ ದೊಡ್ಡತುಮಕೂರು ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲಿನ 13 ಜಿಲ್ಲೆಗಳಲ್ಲಿ ಆದಿಕರ್ನಾಟಕ ಮತ್ತು ಆದಿದ್ರಾವಿಡ ಜಾತಿಗಳ ಬಗ್ಗೆ ಗೊಂದಲವಿದೆ. ಈ ಗೊಂದಲ ಪರಿಹಾರಕ್ಕೆ ನ್ಯಾ.ನಾಗಮೋಹನ ದಾಸ್ ಆಯೋಗ ರಚನೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಯಾವುದೇ ಸಬೂಬು ಹೇಳದೆ ಒಳ ಮೀಸಲಾತಿ ಜಾರಿ ಮಾಡಬೇಕು. ನಾವು ಯಾರ ಪಾಲನ್ನು ಕೇಳುತ್ತಿಲ್ಲ, ನಮ್ಮ ಪಾಲಿನ ಹಕ್ಕು ನಾವು ಕೇಳುತ್ತಿದ್ದೇವೆ ಎಂದರು.
ಈ ವೇಳೆ ಮಾದಿಗ ಸಮುದಾಯದ ಮುಖಂಡರಾದ ವೆಂಕಟೇಶ್ ದೊಡ್ಡತುಮಕೂರು, ಹನುಮಂತಯ್ಯ ಹಳೇಕೋಟೆ, ತಳವಾರ ನಾಗರಾಜು, ಹರ್ಷ ಹಾದ್ರೀಪುರ, ವಕೀಲರಾದ ಕಾಂತರಾಜು, ತೂಬಗೆರೆ ವೆಂಕಟೇಶ್, ಮಂಜುನಾಥ್, ಆರ್.ವಿ.ಶಿವಕುಮಾರ್, ನಾರಸಿಂಹನಹಳ್ಳಿ ಗಂಗರಾಜು, ಕುಂಬಾರಪೇಟೆ ನಾರಾಯಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ…
ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಬರುತ್ತಿದೆ ಎಂದು…
ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…
Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…
ನಾನು ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಕೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಯಾವುದೇ…
ಹೆಣ್ಣಿನ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿದೆ..ಈ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ…