ಕಮನೆಗೆ ತೆರಳಲು ಆಟೋ ಹತ್ತಿದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಹಿಳೆಯ ಕೊರಳಲ್ಲಿದ್ದ ಚಿನ್ನದ ತಾಳಿ ಸಮೇತ ಇದ್ದ ಸುಮಾರು 33 ಗ್ರಾಂ ತೂಕದ ಮಾಂಗಲ್ಯ ಸರ, 4 ಗ್ರಾಂ ತೂಕದ ಚಿನ್ನದ ಕಿವಿ ಓಲೆಯನ್ನು ದೋಚಿದ್ದ ಖತರ್ನಾಕ್ ಜೋಡಿಯನ್ನು ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ತೂಬಗೆರೆ ಪೇಟೆಯ ಯಶೋಧಮ್ಮ ಎನ್ನುವವರು ಜ.11ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ಮಗಳ ಮನೆಗೆ ತೆರಳಿದ್ದು, ಮರಳಿ ಮನೆಗೆ ಬರಲು ಕೊಂಗಾಡಿಯಪ್ಪ ಬಳಿ ಬಂದ ಆಟೋವನ್ನು ಹತ್ತಿದ್ದಾರೆ.
ಈ ಆಟದಲ್ಲಿ ಚಾಲಕನೊಂದಿಗೆ ಓಂಶಕ್ತಿ ಮಾಲಾಧಾರಿ ಮಹಿಳೆಯಿದ್ದು, ಆಕೆಯನ್ನು ಆಲಹಳ್ಳಿ ಬಿಟ್ಟು ನಂತರ ಯಶೋಧಮ್ಮ ಅವರನ್ನು ಮನೆಗೆ ಬಿಡುವುದಾಗಿ ಚಾಲಕ ಕರೆದೊಯ್ದಿದ್ದಾನೆ.
ಬಳಿಕ ನಾಗಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಈ ಜೋಡಿ, ಯಶೋಧಮ್ಮರ 33ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 4 ಗ್ರಾಂ ತೂಕದ ಓಲೆಯನ್ನು ದೋಚಿದ್ದು, ನಂತರ ಆಲಹಳ್ಳಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಬಂಧಿತರನ್ನು ರಾಜಾನುಕುಂಟೆ ಸಮೀಪದ ಹನಿಯೂರ ನಿವಾಸಿ ಆಟೋ ಚಾಲಕ ರಘು ಮತ್ತು ಚೆಲ್ಲಹಳ್ಳಿ ಗ್ರಾಮದ ಶ್ವೇತಾ ಎಂದು ಗುರುತಿಸಲಾಗಿದೆ.
ಇವರಿಬ್ಬರು ಪ್ರೇಮಿಗಳಾಗಿದ್ದು, ಓಂಶಕ್ತಿ ಮಾಲೆ ಧರಿಸಿದ್ದ ಶ್ವೇತಾಳಿಗೆ ಪೂಜಾ ಸಾಮಗ್ರಿ ಕೊಡಿಸಲು ದೊಡ್ಡಬಳ್ಳಾಪುರಕ್ಕೆ ಬಂದು, ಮರಳಿ ತೆರಳುವ ವೇಳೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಘಟನೆ ವಿವರ:
ದಿನಾಂಕ 11/01/2025 ರಂದು ಸಂಜೆ ಸುಮಾರು 6-45 ಗಂಟೆಯಲ್ಲಿ ನಾನು ಕೊಂಗಾಡಿಯಪ್ಪ ಕಾಲೇಜು ಬಳಿ ಇರುವ ನಮ್ಮ ಮಗಳ ಮನೆಗೆ ಹೋಗಿದ್ದು, ನಂತರ ತೂಬಗೆರೆಪೇಟೆಯಲ್ಲಿನ ನಮ್ಮ ಮನೆಗೆ ವಾಪಸ್ ಬರುವ ಸಲುವಾಗಿ ನೆಲಮಂಗಲ ರಸ್ತೆ, ಕೊಂಗಾಡಿಯಪ್ಪ ಹೈಸ್ಕೂಲ್ ಮುಂಭಾಗದಲ್ಲಿ ನಿಂತಿದ್ದಾಗ, ಇಸ್ಲಾಂಪುರ ಕಡೆಯಿಂದ ಕೆ.ಸಿ.ಪಿ ಸರ್ಕಲ್ ಕಡೆಗೆ ಹೋಗಲು ಒಂದು ಆಟೋ ರಿಕ್ಷಾ ಬಂದಿರುತ್ತದೆ, ನಾನು ಈ ಆಟೋ ರಿಕ್ಷಾದಲ್ಲಿ ಹತ್ತಿಕೊಂಡಿದ್ದು, ಈಗಾಗಲೇ ಆಟೋ ರಿಕ್ಷಾದಲ್ಲಿ ಬೇರೆ ಒಬ್ಬ ಮಹಿಳೆ ಇದ್ದು, ಓಂ ಶಕ್ತಿ ಮಾಲೆ ಹಾಕಿರುವಂತೆ ಕಂಡು ಬಂದರು. ನಾನು ಆಟೋ ರಿಕ್ಷಾದಲ್ಲಿ ಹತ್ತಿಕೊಂಡ ನಂತರ ಆ ಮಹಿಳೆ ಆಟೋ ರಿಕ್ಷಾ ಚಾಲಕನಿಗೆ ಭಜನೆಗೆ ಲೇಟ್ ಆಗುತ್ತದೆ ನಮ್ಮ ಮನೆಯವರು ಲೋಕೇಷನ್ ಕಳಿಸಿದಾರೆ ಬೇಗ ಹೋಗಿ ಎಂದು ಹೇಳಿ ಆಟೋ ರಿಕ್ಷಾ ಚಾಲಕನಿಗೆ ಆಟೋವನ್ನು ಬೇಗನೆ ಚಾಲನೆ ಮಾಡಿಕೊಂಡು ಹೋಗುವಂತೆ ಹೇಳಿದ್ದು, ಆಟೋ ರಿಕ್ಷಾ ಚಾಲಕ ಆಟೋವನ್ನು ಚಾಲನೆ ಮಾಡಿಕೊಂಡು ಕೆ.ಸಿ.ಪಿ.ಸರ್ಕಲ್ ಹತ್ತಿರ ಹೋಗಿದ್ದು, ಆಟೋ ರಿಕ್ಷಾವನ್ನು ತೇರಿನ ಬೀದಿ ಕಡೆಗೆ ತಿರುಗಿಸದೆ, ನನ್ನನ್ನು ಆಲಹಳ್ಳಿ, ಕಡೆಗೆ ಕರೆದುಕೊಂಡು ಹೋಗಿ, ಲೊಕೇಶನ್ ಸಿಗುತ್ತಿಲ್ಲ ಎಂದು ಹೇಳಿ ಅಲ್ಲಿಂದ ಅರಳುಮಲ್ಲಿಗೆ, ನಾಗಸಂದ್ರ ಕಡೆಗಳಲ್ಲಿ ಸುತ್ತಾಡಿಸಿ ನಂತರ ಚಿಕ್ಕತುಮಕೂರು ಕಡೆಗೆ ಕರೆದುಕೊಂಡು ಹೋಗಿ, ಚಿಕ್ಕತುಮಕೂರು ಗ್ರಾಮದ ಬಳಿ ಆಟೋ ರಿಕ್ಷಾ ಚಾಲಕ ಮತ್ತು ಆಟೋ ದಲ್ಲಿ ಇದ್ದ ಮಹಿಳೆ ಇಬ್ಬರೂ ಸೇರಿ ನನ್ನನ್ನು ಹೆದರಿಸಿ, ಮಹಿಳೆಯು ನನ್ನ ಕೊರಳಲ್ಲಿ ಇದ್ದ ಚಿನ್ನದ ತಾಳಿ ಸಮೇತ ಇದ್ದ ಸುಮಾರು 33 ಗ್ರಾಂ ತೂಕದ ಮಾಂಗಲ್ಯ ಸರ, 4 ಗ್ರಾಂ ತೂಕದ ಚಿನ್ನದ ಕಿವಿ ಓಲೆಯನ್ನು ನನ್ನಿಂದ ಬಲವಂತವಾಗಿ ಬಿಚ್ಚಿಕೊಂಡು, ನನ್ನನ್ನು ಕೂಗದಂತೆ ಹೆದರಿಸಿದರು.
ಅಲ್ಲಿಂದ ಮತ್ತೆ ನನ್ನನ್ನು ಆಟೋ ರಿಕ್ಷಾದಲ್ಲಿ ಅರಳುಮಲ್ಲಿಗೆ ಹತ್ತಿರ ಕರೆದುಕೊಂಡು ಬಂದು ಸಂಜೆ ಸುಮಾರು 7-30 ಗಂಟೆಯಲ್ಲಿ ನನ್ನನ್ನು ಅರಳುಮಲ್ಲಿಗೆ ಬಸ್ ಸ್ಟ್ಯಾಂಡ್ ಸಮೀಪದಲ್ಲಿ ಆಟೋ ರಿಕ್ಷಾದಿಂದ ಕೆಳಗೆ ಇಳಿಸಿ ಅಲ್ಲಿಂದ ಹೊರಟು ಹೋದರು. ನಂತರ ನಾನು ಅರಳುಮಲ್ಲಿಗೆ ಬಸ್ ಸ್ಟ್ಯಾಂಡ್ ಗೆ ನಡೆದುಕೊಂಡು ಹೋಗಿ, ದೊಡ್ಡಬಳ್ಳಾಪುರ ಕಡೆಗೆ ಬರುತ್ತಿದ್ದ ಒಂದು ಕೆ.ಎಸ್.ಆರ್.ಟಿ.ಸಿ ನಲ್ಲಿ ದೊಡ್ಡಬಳ್ಳಾಪುರ ಬಸ್ ಸ್ಟ್ಯಾಂಡ್ ಗೆ ಬಂದು, ಅಲ್ಲಿಂದ ಮನೆಗೆ ಹೋಗಿದ್ದೇನೆ ಯಶೋಧಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…
ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…
ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ…
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…