ಒಪನ್‌ ಸರ್ಜರಿಗೆ ನೋ ಹೇಳಿ ರೋಬೋಟಿಕ್‌ ಸರ್ಜರಿ ನಡೆಸಿದ ವೈದ್ಯರು: ಗುಣಮುಖರಾಗಿ ಮನೆಗೆ ತೆರಳಿದ ರೋಗಿ

ವೈಟ್‌ ಫಿಲ್ದ್‌ , ಬೆಂಗಳೂರು: ಕಿಡ್ನಿ ಕ್ಯಾನ್ಸರ್‌ ಗೆ ಅಪರೇಷನ್‌ ಮಾಡಿಸಿದ ಒಂದು ವರ್ಷದ ಬಳಿಕ ಕಾಣಿಸಿಕೊಂಡ ನೋವಿಗೆ ಕಾರಣವೇನೆಂದು ತಿಳಿಯಲು ಸುಮಾರು ಆಸ್ಪತ್ರೆ ಸುತ್ತುತ್ತಾ ಇದ್ದ ವೃದ್ದನಿಗೆ ವೈಟ್‌ ಫೀಲ್ಡ್‌ ನಲ್ಲಿರುವ ಮೆಡಿಕವರ್‌ ಆಸ್ಪತ್ರೆಯಲ್ಲಿ ಪರಿಹಾರ ನೀಡಿದೆ .

ಪಶ್ವಿಮ ಬಂಗಾಳ ಮೂಲದ 68 ವರ್ಷ ವಯಸ್ಸಿನ ವೃದ್ದನಿಗೆ ವರ್ಷದ ಹಿಂದೆ ಕಿಡ್ನಿ ಕ್ಯಾನ್ಸರ್‌ ಗೆ ಅಪರೇಷನ್‌ ಮಾಡಲಾಗಿತ್ತು. ಮುಂಬೈಯಲ್ಲಿಅಪರೇಷನ್‌ ನಡೆಸಿ ಒಂದು ವರ್ಷದ ಬಳಿಕ ಮೂತ್ರ ವಿಷರ್ಜನೆ ಮಾಡುವಾಗ ಸಾಕಷ್ಟು ನೋವು ಕಂಡು ಬಂದಿತ್ತು . ಆದ್ರೆ ಅದಕ್ಕೆ ಕಾರಣವೇನು ಎಂದು ತಿಳಿಯಲು ಬಹುತೇಕ ಆಸ್ಪತ್ರೆಗಳಿಗೆ ಸುತ್ತಿದ್ರೂ ನೋವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ . ಬಳಿಕ ಮೆಡಿಕವರ್‌ ಆಸ್ಪತ್ರೆಗೆ ಬಂದು ಇಲ್ಲಿನ ರೋಬೋಟಿಕ್‌ ತಜ್ಞ ಡಾ. ಪ್ರಮೋದ್‌ ರವರನ್ನು ಭೇಟಿ ಮಾಡಿ, ಬಯೋಸ್ಪಿ ಮಾಡಿಸಿದ ಬಳಿಕ ನೋವಿಗೆ ಕಾರಣವೇನು ಎಂದು ತಿಳಿದುಬಂದಿದೆ. ಅಪರೇಷನ್‌ ಮಾಡಿ ಒಂದು ವರ್ಷದ ಬಳಿಕ ಮತ್ತೆ ಯೂರಿನ್‌ ಚೀಲದಲ್ಲಿ ಕ್ಯಾನ್ಸರ್‌ ಇರೋದನ್ನು ಡಾ. ಪ್ರಮೋದ್‌ ವೃದ್ದನಿಗೆ ತಿಳಿಸಿದರು. ಬಳಿಕ ಬೇರೆ ವೈದ್ಯರ ಸಲಹೆ ಪಡೆಯಲು ಮುಂಬೈನ ಹೆಸರಾಂತ ಕ್ಯಾನ್ಸರ್‌ ಆಸ್ಪತ್ರೆಗೆ ತೆರಳಿದರು. ಆದ್ರೆ ಅಲ್ಲಿ ವೃದ್ದನಿಗೆ ಓಪನ್‌ ಸರ್ಜರಿ ನಡೆಸಲು ಸಲಹೆ ನೀಡಿದರು. ಆದ್ರೆ ವೃದ್ದ ಓಪನ್‌ ಸರ್ಜರಿ ಬೇಡ ರೋಬೋಟಿಕ್‌ ಸರ್ಜರಿ ಬೇಕೆಂದು ಮೆಡಿಕವರ್‌ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು .

ಸರ್ಜರಿ ಸ್ವಲ್ಪ ರಿಸ್ಕ್‌ ಇತ್ತು ಯಾಕೆಂದ್ರೆ ಅವರಿಗೆ ಒಂದೇ ಕಿಡ್ನಿ ಇದ್ದಿದ್ದು , ಇನ್ನೊಂದು ಕಿಡ್ನಿಯನ್ನು ಕ್ಯಾನ್ಸರ್‌ ಬಂದ ಕಾರಣ ತೆಗೆಯಲಾಗಿತ್ತು. ಇದ್ದ ಒಂದು ಕಿಡ್ನಿ ಕೂಡ ವೀಕ್‌ ಇತ್ತು . ಸಾಮಾನ್ಯವಾಗಿ ಕಿಡ್ನಿ ಕ್ರಿಯೇಟನೈನ್‌1.3ಇರಬೇಕು . ಆದ್ರೆ ಇವರಿಗೆ ಕಿಡ್ನಿ ಕ್ರಿಯೆಟಿನೈನ್‌ 2.5ಇತ್ತು ಹಾಗೂ ಹಿಮೋಗ್ಲೋಬಿನ್‌ ಕೂಡ ಕಮ್ಮಿ ಇತ್ತು . ಮೊದಲೇ ಅವರಿಗೆ ಪದೇ ಪದೇ ಮೂತ್ರ ವಿಸರ್ಜನೆಯಾಗ್ತಾಯಿದ್ದು, ಸಿಕ್ಕಾಪಟ್ಟೆ ನೋವು ಅನುಭವಿಸಿದ್ದರು . ಹಾಗಾಗೀ ಡಾ . ಪ್ರಮೋದ್‌ ರೋಬೊಟಿಕ್‌ ಸರ್ಜರಿ ಮುಖಾಂತರ ಕ್ಯಾನ್ಸರನ್ನು ಗುಣಮುಖ ಮಾಡಿದರು.

ಕಿಡ್ನಿ ಪೈಪ್‌ ಯನ್ನು ಕರುಳಿನ ಒಂದು ಭಾಗಕ್ಕೆ ಜಾಯಿಂಟ್‌ ಮಾಡಿ , ಕಿಬ್ಬೊಟ್ಟೆಯ ವಾಲ್‌ ಗೆ ಸೇರಿಸಲಾಗಿತ್ತು. ಕರುಳಿನ ಒಂದು ಭಾಗವನ್ನು ತೆಗೆದು ಯೂರಿನ್‌ ಬರೋದಕ್ಕೆ ಕೃತಕ ಮೂತ್ರಕೋಶವನ್ನು ಕ್ರಿಯೆಟ್‌ ಮಾಡಲಾಗಿತ್ತು .
ರೋಬೋಟಿಕ್‌ ಸರ್ಜರಿ ನಡೆಸಿದ್ರೆ ಶಸ್ತ್ರ ಚಿಕಿತ್ಸೆ ವೇಳೆ ರಕ್ತಸ್ರಾವ ಇರೋದಿಲ್ಲ, ಆದ್ರೆ ಓಪನ್‌ ಸರ್ಜರಿ ನಡೆಸಿದ್ರೆ ಸಾಕಷ್ಟು ರಕ್ತಸ್ರಾವ ವಾಗುತ್ತದೆ . ಅಲ್ಲದೇ ರೋಬೊಟಿಕ್‌ ಸರ್ಜರಿ ನಡೆಸಿದ್ರೆ ನಾಲ್ಕೆ ದಿನದಲ್ಲಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ . ಓಪನ್‌ ಸರ್ಜರಿ ನಡೆಸಿದರೆ ರಿಕವರಿ ಟೈಮ್‌ ಕೂಡ ಹೆಚ್ಚು ಇರುತ್ತದೆ . ರೋಬೊಟಿಕ್‌ ಸರ್ಜರಿ ನಡೆಸಿದ ಬಳಿಕ ವೃದ್ದನಲ್ಲಿ ಯಾವುದೇ ರೀತಿಯ ನೋವು ಕಂಡುಬಂದಿಲ್ಲ ಎಂದು ಡಾ. ಪ್ರಮೋದ್‌ ಸಂತಸ ವ್ಯಕ್ತಪಡಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!