ಒಂದೇ ಹುದ್ದೆಗೆ ಸರ್ಕಾರದಿಂದ ಐವರಿಗೆ ವರ್ಗಾವಣೆ ಆದೇಶ ಆರೋಪ: ಪ್ರತಿಪಕ್ಷ ನಾಯಕರಿಗೆ ಸುಳ್ಳು ಮಾಹಿತಿ; ವಿರೋಧ ಪಕ್ಷಗಳ ಆರೋಪದಲ್ಲಿ ಸತ್ಯದ ಕೊರತೆ

ಸರ್ಕಾರ ಬದಲಾದಂತೆ ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿಯ ಬದಲಾವಣೆ ಪ್ರಕ್ರಿಯೆ ಸಹಜವಾಗಿದೆ.

ಸಿಬ್ಬಂದಿ, ಅಧಿಕಾರಿಗಳು ಪ್ರಸಕ್ತ ಸಾಲಿನ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಅವಧಿಯು 2023ರ ಜುಲೈ.3 ರವರೆಗೆ ನಡೆಯಲಿದೆ. ವರ್ಗಾವಣೆ ಪ್ರಕ್ರಿಯೆ ಕುರಿತು ಪ್ರತಿಪಕ್ಷಗಳ ನಾಯಕರುಗಳು ಮಾಡಿರುವ ಒಂದೇ ಹುದ್ದೆಗೆ ಸರ್ಕಾರದಿಂದ ಐವರಿಗೆ ವರ್ಗಾವಣೆ ಆದೇಶವೆಂಬುದು ಸುಳ್ಳು ಆರೋಪವಾಗಿದೆ.

ಸಾಮಾನ್ಯ ವರ್ಗಾವಣೆ ಅವಧಿಯಲ್ಲಿ ಅಧಿಕಾರಿಗಳ, ಸಿಬ್ಬಂದಿಯ ವರ್ಗಾವಣೆ ಕುರಿತು ಮುಖ್ಯಮಂತ್ರಿಗಳ ಕಚೇರಿಗೆ ವಿವಿಧ ಇಲಾಖೆಗಳಿಗೆ ಸ್ಥಳ ನಿಯುಕ್ತಿ ಕೋರಿ ದಿನನಿತ್ಯ ನೂರಾರು ಪತ್ರಗಳು ಬರಲಿವೆ. ಅದರಂತೆ ಮುಖ್ಯಮಂತ್ರಿ ಅವರು ಮನವಿ ಮೇರೆಗೆ ಹುದ್ದೆಗೆ ಹೆಸರು ಶಿಫಾರಸ್ಸುಗಳನ್ನು ಮಾಡಿರುತ್ತಾರೆಯೇ ಹೊರತು ಸರ್ಕಾರಿ ಆದೇಶವನ್ನು ಹೊರಡಿಸಿರುವುದಿಲ್ಲ‌.

ಗ್ರೂಪ್ ‘ಎ’ ಅಧಿಕಾರಿಗಳು ಕನಿಷ್ಠ ಅವಧಿಯಲ್ಲಿ ವರ್ಗಾವಣೆಗೊಳ್ಳುವುದು ಸಾಮಾನ್ಯ. ಅಂತೆಯೇ  ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ(ಎಸ್‌ಹೆಚ್‌ಡಿಪಿ) ಯೋಜನಾ ಅನುಷ್ಠಾನ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೆಕ್ಕಾಧಿಕಾರಿ ಎಂ.ಜಿ.ಮಂಜುನಾಥ ಅವರು ಅವರು ಒಂದೇ ಹುದ್ದೆಯಲ್ಲಿ ಮೂರು ವರ್ಷ ನಾಲ್ಕು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಹುದ್ದೆಯಲ್ಲಿಯೇ ಮುಂದುವರಿಯುತ್ತಿದ್ದಾರೆ.

ಪರೀಕ್ಷಾರ್ಥ ಲೆಕ್ಕ ಪರಿಶೋಧನಾಧಿಕಾರಿ ಆಗಿದ್ದಾಗ ತರಬೇತಿಯಿಂದ ಬಿಡುಗಡೆಗೊಳಿಸಿ, ಎಂ.ಜಿ.ಮಂಜುನಾಥ್ ಅವರನ್ನು ಸರ್ಕಾರವು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅವರ ಕಚೇರಿಯ ಲೆಕ್ಕಾ ಪರಿಶೋಧನಾಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿತ್ತು. ಆದರೆ ಶಿವಮೊಗ್ಗ ಮೂಲದವರಾದ ಎಂ.ಜಿ.ಮಂಜುನಾಥ್ ಅವರು ಮಾಜಿ ಮುಖ್ಯಮಂತ್ರಿ ಅವರ ರಾಜಕೀಯ ಪ್ರಭಾವ ಬಳಸಿ ಆದೇಶವನ್ನು ಪರಿವರ್ತಿಸಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಲೆಕ್ಕ ಪರಿಶೋಧನಾಧಿಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನೇಶ್‌ಕುಮಾರ್ ಅವರಿಗೆ ತೊಂದರೆ ನೀಡಿ ಸದರಿ ಹುದ್ದೆಗೆ ವರ್ಗಾವಣೆಗೊಂಡು(ಪ್ರಧಾನ ನಿರ್ದೇಶಕರ ಕಚೇರಿ, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ರವರ ಅಧಿಕೃತವಾಗಿ ಜ್ಞಾಪನಾ ಪತ್ರ ಸಂಖ್ಯೆ: ಸಿಎಸ್ಎ1/ಎಒಎ/2019(1)/1722, ದಿನಾಂಕ: 05.02.2020) ವರದಿ ಮಾಡಿಕೊಂಡು ಕಾರ್ಯ ನಿರ್ವಹಿಸಿರುತ್ತಿರುತ್ತಾರೆ.

ಲೆಕ್ಕ ಪರಿಶೋಧನಾಧಿಕಾರಿ ಲೋಕೇಶ್ವರಿ ಅವರನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಲೆಕ್ಕ ಪರಿಶೋಧನಾಧಿಕಾರಿ ಅವರ ಹುದ್ದೆಗೆ ವರ್ಗಾಯಿಸಿ ಸರ್ಕಾರ ಆದೇಶ (ಆದೇಶ ಸಂಖ್ಯೆ: ಆಇ/362/ರಾಲೆಪ/2021, ದಿನಾಂಕ: 26.11.2021) ಹೊರಡಿಸಿದ್ದರೂ ಅಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಯೋಜನಾಧಿಕಾರಿ ಬಿ.ಗುರುಪ್ರಸಾದ್ ಅವರು ಲೋಕೇಶ್ವರಿ.ಕೆ.ಎಸ್. ಅವರನ್ನು ವರದಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದಿಲ್ಲ. ಈ ಕುರಿತು ಲೆಕ್ಕ ಪರಿಶೋಧನಾಧಿಕಾರಿ ಲೋಕೇಶ್ವರಿ.ಕೆ.ಎಸ್ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ(ಕೆಎಟಿ) ಮೊರೆ ಹೋಗುತ್ತಾರೆ. ಲೋಕೇಶ್ವರಿ ಅವರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬೂದಿಹಾಳ್ ಅವರನ್ನು ಒಳಗೊಂಡ ಪೀಠವು ಪ್ಯಾರಾ-9ರಲ್ಲಿ ಮುಖ್ಯ ಯೋಜನಾಧಿಕಾರಿ ಬಿ.ಗುರುಪ್ರಸಾದ್ ಅವರಿಗೆ ಐದು ಸಾವಿರ ರೂಪಾಯಿ ದಂಡವನ್ನು ವಿಧಿಸುತ್ತದೆ.

ನಂತರ ಎಸ್‌ಹೆಚ್‌ಡಿಪಿಯ ಮುಖ್ಯ ಯೋಜನಾಧಿಕಾರಿ ಬಿ.ಗುರುಪ್ರಸಾದ್ ಹಾಗೂ ಲೆಕ್ಕ ಪರಿಶೋಧನಾಧಿಕಾರಿ ಎಂ.ಜಿ.ಮಂಜುನಾಥ್ ಅವರು ಕಾರ್ಯ ನಿರ್ವಹಿಸುತ್ತಿದ್ದ ಎಸ್‌ಹೆಚ್‌ಡಿಪಿಯ ಲೆಕ್ಕ ಪರಿಶೋಧನಾಧಿಕಾರಿ ಹುದ್ದೆಯನ್ನು ಲೆಕ್ಕಾಧಿಕಾರಿ ಹುದ್ದಗೆ ಉನ್ನತೀಕರಿಸಿಲು ನಿಕಟಪೂರ್ವ ಮುಖ್ಯಮಂತ್ರಿ ಅವರ ಪ್ರಭಾವ ಬಳಸಿ, ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಾರೆ. ಅದರಂತೆ ಸರ್ಕಾರ ಆದೇಶ(ಅಧಿಸೂಚನೆ ಸಂಖ್ಯೆ: ಆಇ/303/ರಾಲೆಪ/2021/ಬೆಂಗಳೂರು, ದಿನಾಂಕ: 21.12.2021) ಹೊರಡಿಸಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ಅವರ ಪ್ರಭಾವ ಬಳಸಿ ಉನ್ನತೀಕರಿಸಿದ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಬಡ್ತಿಯೊಂದಿಗೆ ಎಂ.ಜಿ.ಮಂಜುನಾಥ್ ಮುಂದುವರೆಯುತ್ತಾರೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ(ಎಸ್‌ಹೆಚ್‌ಡಿಪಿ) ಲೆಕ್ಕ ಪರಿಶೋಧನಾಧಿಕಾರಿ ಹಾಗೂ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಎಂ.ಜಿ.ಮಂಜುನಾಥ್ ಅವರು ಒಟ್ಟಾರೆ 3 ವರ್ಷ 4 ತಿಂಗಳು ಕಾಲ (ಪ್ರಸ್ತುತ ಎಸ್‌ಹೆಚ್‌ಡಿಪಿ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.) ಕಾರ್ಯ ನಿರ್ವಹಿಸಿರುತ್ತಾರೆ. ಆದಾಗೂ ಎಂ.ಜಿ.ಮಂಜುನಾಥ್ ಅವರು ಪ್ರಸಕ್ತ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಮುಖಂಡರುಗಳಿಗೆ ಸುಳ್ಳು ಮಾಹಿತಿ ನೀಡಿ ಕರ್ತವ್ಯ ಲೋಪ ಎಸಗಿರುತ್ತಾರೆ.

ಒಟ್ಟಿನಲ್ಲಿ ಪ್ರತಿಪಕ್ಷಗಳ ಹೇಳಿಕೆಯಂತೆ ಒಂದೇ ಹುದ್ದೆಗೆ ನಾಲ್ಕು ಅಥವಾ ಐದು ಅಧಿಕಾರಿಗಳನ್ನು ವರ್ಗಾಯಿಸಿ ಆದೇಶಿರುವುದು ಸುಳ್ಳು ಹೇಳಿಕೆಯಷ್ಟೇ ಹೊರತು ಒಂದು ಹುದ್ದೆಗೆ ಶಿಫಾರಸ್ಸು ಪತ್ರ(ಟಿಪ್ಪಣಿ ಪತ್ರ) ಆಗಿರುತ್ತದೆ.

ಒಟ್ಟಿನಲ್ಲಿ ಪ್ರತಿಪಕ್ಷಗಳ ಹೇಳಿಕೆಯಂತೆ ಒಂದೇ ಹುದ್ದೆಗೆ ನಾಲ್ಕು ಅಥವಾ ಐದು ಅಧಿಕಾರಿಗಳನ್ನು ವರ್ಗಾಯಿಸಿ ಆದೇಶಿಸಿರುವುದು ಸುಳ್ಳು ಹೇಳಿಕೆಯಷ್ಟೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ. ಟಿಪ್ಪಣಿ ಪತ್ರಗಳು ಗೋಪ್ಯತಾ ಮಾಹಿತಿ ಆಗಿದ್ದು ಈ ಮಾಹಿತಿಯು ಸೋರಿಕೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.

Leave a Reply

Your email address will not be published. Required fields are marked *