ಹೊಸಕೋಟೆ: ತಿರುಮಶೆಟ್ಟಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ರಕ್ತಚಂದನ ತುಂಡುಗಳ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಕೋಟೆ ತಾಲೂಕಿನ ಕೆಟ್ಟಿಗೆನಹಳ್ಳಿ ಗ್ರಾಮದಲ್ಲಿನ ನೀಲಗಿರಿ ತೋಪಿನಲ್ಲಿ ಯಾರಿಗೂ ಕಾಣದಂತೆ ರಕ್ತ ಚಂದನವನ್ನು ಅಡಗಿಸಿಡಲಾಗಿತ್ತು.
ಅಂದಾಜು ಒಂದು ಕೋಟಿ ಬೆಲೆ ಬಾಳುವ ಸುಮಾರು 180 ರಕ್ತಚಂದನ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ತಿರುಪತಿಯಿಂದ ತಂದು ಹೊಸಕೋಟೆಯಲ್ಲಿ ಅಡಗಿಟ್ಟಿಸಿದ್ದರು. ಈ ಕುರಿತು ತಿರುಪತಿಯಲ್ಲಿ ರಕ್ತ ಚಂದನ ಕಳ್ಳತನ ಪ್ರಖರಣ ದಾಖಲಾಗಿತ್ತು.
ಆಂಧ್ರಪ್ರದೇಶ ಮತ್ತು ತಿರುಮಶೆಟ್ಟಿಹಳ್ಳಿ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಿ ರಕ್ತಚಂದನವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ವಶಕ್ಕೆ ಪಡೆದ ರಕ್ತ ಚಂದನದ ತುಂಡುಗಳನ್ನು ಆಂಧ್ರಪ್ರದೇಶದ ಪೊಲೀಸರಿಗೆ ಒಪ್ಪಿಸಲಾಗಿದೆ.