ಒಂಟಿ ಮನೆ ಗುರಿಯಾಗಿಸಿ ಕಳವು ಯತ್ನ ಪ್ರಕರಣ: ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ, ಪರಿಶೀಲನೆ

ಗುರುವಾರ ರಾತ್ರಿ ಒಂಟಿ ಮನೆ ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಯತ್ನಿಸಿದ್ದ ಖದೀಮರು. ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದ ಹೊರವಲಯದ ಮುನಿಯಪ್ಪ ಮತ್ತು ರಾಮಕೃಷ್ಣ ಎಂಬುವವರ ತೋಟದ ಮನೆಯಲ್ಲಿ ಘಟನೆ ನಡೆದಿತ್ತು.

ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಸ್ಥಳಕ್ಕೆ ಇಂದು ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಯ ಮಾಲೀಕರು ಗುರುವಾರ ರಾತ್ರಿ ಸುಮಾರು 8ಗಂಟೆ ಸಮಯದಲ್ಲಿ ನಾಯಿಗಳಿಗೆ ಊಟ ತರಲು ಎರಡು ಕಿಲೋಮೀಟರ್ ದೂರದ ಕೆಳಗಿನಜೂಗಾನಹಳ್ಳಿಗೆ ಹೋಗಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡು ಸೈಜ್ ಕಲ್ಲುಗಳಿಂದ ಬಾಗಿಲುಗಳಿಗೆ ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳರು.

ಮನೆಯ ಬಳಿ ನಾಲ್ಕು ನಾಯಿಗಳನ್ನು ಸಾಕಲಾಗಿದ್ದು, ಅವುಗಳನ್ನು ಹೊಡೆದು ಪ್ರಾಣಿ ಹಿಂಸೆ ಮಾಡಿ ಅಮಾನವೀಯತೆ ಮೆರೆದಿದ್ದರು.

Leave a Reply

Your email address will not be published. Required fields are marked *