ಐಸ್ ಕ್ರೀಮ್ ತಯಾರಿಕಾ ಘಟಕದಲ್ಲಿ 1.75 ಲಕ್ಷ ಮೌಲ್ಯದ ಐಸ್ ಕ್ರೀಮ್ ಉತ್ಪಾದಕ ಪದಾರ್ಥಗಳ ಕಳವು; 2 ತಿಂಗಳಿಂದ ಕಳವು ಮಾಡುತ್ತಿದ್ದ ಫ್ಯಾಕ್ಟರಿ ಸಿಬ್ಬಂದಿ

ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಸಿಬ್ಬಂದಿಯೇ ಐಸ್ ಕ್ರಿಮ್ ತಯಾರಿಕೆಗೆ ಬೇಕಾದ ಪದಾರ್ಥಗಳ ಕಳವು ಮಾಡಿದ್ದಾರೆ, 2 ತಿಂಗಳಿಂದ ನಿರಂತರವಾಗಿ ಕಳವು ಮಾಡಿದ್ದ ಅವರು ಸುಮಾರು 1.75 ಲಕ್ಷ ಪದಾರ್ಥಗಳನ್ನ ಕದ್ದು ತಾವು ವಾಸವಾಗಿದ್ದ ರೂಮ್ ನಲ್ಲಿ ಇಟ್ಟಿದ್ದರು, ಘಟನೆ ನಂತರ ಆರೋಪಿಗಳ ಪರಾರಿಯಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿರುವ ಶ್ರೀವಷಿಷ್ಟ ಟ್ರೇಡರ್ಸ್ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ, ರಮೇಶ್ ಜಮನಾ ಫ್ಯಾಕ್ಟರಿ ಮಾಲೀಕರಾಗಿದ್ದು, ಫ್ಯಾಕ್ಟರಿಯಲ್ಲಿ ಐಸ್ ಕ್ರೀಮ್ ತಯಾರಿಸಲಾಗುತ್ತಿತ್ತು, ಲಯ ಮತ್ತು ವಂಶಿಕೃಷ್ಣ ಎಂಬುವರು ಫ್ಯಾಕ್ಟರಿಯ ಸಿಬ್ಬಂದಿಗಳಾಗಿದ್ದು, ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು ಸಾಬೀತಾಗಿತ್ತು, ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಯ ಕಳೆದ 10 ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ, ವಂಶಿಕೃಷ್ಣ ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದ, ಕೆಲಸ ಮುಗಿದ ನಂತರ ಕೊನೆಯಲ್ಲಿ ಹೋಗುತ್ತಿದ್ದ ಇಬ್ಬರು ಐಸ್ ಕ್ರೀಮ್ ತಯಾರಿಕೆಗೆ ಬೇಕಾದ ಪದಾರ್ಥಗಳ ಕಳವು ಮಾಡುತ್ತಿದ್ದರು, ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕಳವು ಮಾಡುತ್ತಿದ್ದ ಇಬ್ಬರು ಐಸ್ ಕ್ರೀಮ್ ತಯಾರಿಯಲ್ಲಿ ಬಳಸುವ ಗಿಯಾಂಡ್ಯೂಜ್ , ಕ್ಯಾಶುವ್ ಕಾರ್ನಲ್, ರೋಸ್ಟೇಡ್ ಆಲ್ಮಂಡ್ ಪೇಸ್ಟ್ , ವೈಟ್ ಚಾಕುಲೇಟ್ ಪೇಸ್ಟ್ ಗಳ ಕಳವು ಮಾಡಿದ್ದರು. ಫ್ಯಾಕ್ಟರಿಯಲ್ಲಿದ್ದ ಸಿಸಿಟಿವಿಗಳಿಗೆ ಗ್ರೀಸ್ ಬಳಿದು ಕಳ್ಳತನದಲ್ಲಿ ಭಾಗಿಯಾಗುತ್ತಿದ್ದ ಕಳ್ಳರು. ಪದಾರ್ಥಗಳ ಕಳವಾಗುತ್ತಿರುವ ಸಂಶಯದ ಮೇಲೆ ಲಯರವರನ್ನ ಕಳೆದ ತಿಂಗಳು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಫೆಬ್ರವರಿ 6 ಲಯ ಮತ್ತು ವಂಶಿಕೃಷ್ಣ ವಾಸವಾಗಿದ್ದ ರೂಮ್ ಚೆಕ್ ಮಾಡಿದ್ದಾಗ ಐಸ್ ಕ್ರಿಮ್ ಪದಾರ್ಥಗಳು ಪತ್ತೆಯಾಗಿದೆ. ಘಟನೆ ನಂತರ ಇಬ್ಬರು ನಾಪತ್ತೆಯಾಗಿದ್ದಾರೆ, ಪ್ಯಾಕ್ಟರಿಯಲ್ಲಿ ಪರಿಶೀಲನೆ ಮಾಡಿದ್ದಾಗ ಸುಮಾರು 1 ಲಕ್ಷ 75 ಸಾವಿರ ಮೌಲ್ಯದ ಪದಾರ್ಥಗಳು ಕಳವು ಮಾಡಿರುವು ತಿಳಿದು ಬಂದಿದೆ, ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *