ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದ್ದು ಉದ್ಘಾಟನಾ ಹಾಗೂ ಫೈನಲ್ ಪಂದ್ಯಗಳು ಗುಜರಾತ್ ರಾಜ್ಯದ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾದ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಎದುರಿಸಲಿದೆ.
ಭಾರತ ತಂಡದ ವೇಳಾಪಟ್ಟಿ
ಅಕ್ಟೋಬರ್ 11 ದೆಹಲಿಯಲ್ಲಿ= ಆಫ್ಘಾನಿಸ್ತಾನ
ಅಕ್ಟೋಬರ್ 15 ಅಹಮದಾಬಾದ್= ಪಾಕಿಸ್ತಾನ
ಅಕ್ಟೋಬರ್ 19 ಪುಣೆ= ಬಾಂಗ್ಲಾದೇಶ
ಅಕ್ಟೋಬರ್ 22 ಧರ್ಮಶಾಲ= ನ್ಯೂಜಿಲೆಂಡ್
ಅಕ್ಟೋಬರ್ 29 ಲಕ್ನೋ= ಇಂಗ್ಲೇಂಡ್
ನವೆಂಬರ್ 02 ಮುಂಬೈ= ಕ್ವಾಲಿಫೈಯರ್ 2 ತಂಡ
ನವೆಂಬರ್ 05 ಕೊಲ್ಕತ್ತಾ= ದಕ್ಷಿಣ ಆಫ್ರಿಕಾ
ನವೆಂಬರ್ 11 ಬೆಂಗಳೂರು= ಕ್ವಾಲಿಫೈಯರ್ 1 ತಂಡ
ತವರಿನಲ್ಲಿ ನಡೆಯುತ್ತಿರುವ 2023 ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ದಶಕಗಳಿಂದ ಐಸಿಸಿ ಟ್ರೋಫಿಯ ಬರವನ್ನು ನೀಗಿಸುವುದೇ ಕಾದು ನೋಡಬೇಕಿದೆ.