ಮಹಾರಾಷ್ಟ್ರ: ಐಫೋನ್ 16 ಆವೃತ್ತಿಯ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ದೆಹಲಿ ಹಾಗೂ ಮುಂಬೈನ ಐಫೋನ್ ಸ್ಟೋರ್ ಗಳಲ್ಲಿ ಮಾತ್ರ ಲಭ್ಯವಿದ್ದು, ಇದೀಗ ಈ ಫೋನ್ ಖರೀದಿಸಲು ಬೆಳಗ್ಗೆ 5 ಗಂಟೆಯಿಂದಲೆ ಜನ ಜಮಾಯಿಸಿದ್ದಾರೆ.
‘ಮೇಕ್ ಇನ್ ಇಂಡಿಯಾ’ ಐಫೋನ್ 16 ಗಾಗಿ ಮುಂಗಡ ಆರ್ಡರ್ ನಲ್ಲಿ ಏರಿಕೆ ಕಂಡಿದೆ.
ಐಫೋನ್ 16 ಪ್ರೊ ಬೆಲೆ ₹1.19 ಲಕ್ಷ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ ₹1.44ಲಕ್ಷದಿಂದ ಲಭ್ಯ’ ಎಂದು ಕಂಪನಿ ಹೇಳಿದೆ.
ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಹಾಗೂ 1 ಟಿಬಿ ಎಕ್ಸ್ಟ್ರನಲ್ ಸಾಮರ್ಥ್ಯದೊಂದಿಗೆ ಲಭ್ಯವಿದೆ. ಈವರೆಗಿನ ಐಫೋನ್‌ಗಳಲ್ಲೇ ಅತಿ ದೊಡ್ಡ ಡಿಸ್‌ಪ್ಲೇ 6.3 ಇಂಚು ಹಾಗೂ 6.9 ಇಂಚಿನ ಪರದೆಯುಳ್ಳ ಫೋನ್‌ಗಳು ಇವಾಗಿವೆ.
ಇದೇ ಮೊದಲ ಬಾರಿಗೆ ಹಿಂದಿನ ಆವೃತ್ತಿಯ ದುಬಾರಿ ಮಾದರಿಯ ಫೋನ್ ಬೆಲೆಗಿದ ಅಗ್ಗದ ಬೆಲೆಗೆ 16 ಸರಣಿಯ ಐಫೋನ್ ಪ್ರೊ ಸರಣಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.
ಭಾರತದಲ್ಲಿ ತಯಾರಾದ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಫೋನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಐಫೋನ್ 16ರ ಬೆಲೆ ₹79,900ರಿಂದ ಆರಂಭವಾದರೆ, 16 ಪ್ಲಸ್ ಫೋನ್ ಬೆಲೆ ₹89,900ರಿಂದ ಲಭ್ಯ. ಈ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಎಕ್ಸ್ಟ್ರನಲ್ ಸಾಮರ್ಥ್ಯದೊಂದಿಗೆ ಲಭ್ಯ ಎಂದು ಕಂಪನಿ ಹೇಳಿದೆ.
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…
ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…
ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…