ಐಫೋನ್ 16 ಆವೃತ್ತಿಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆ: ಐಫೋನ್ 16 ಖರೀದಿಸಲು ಮುಗಿಬಿದ್ದ ಜನ: ಬೆಳಗ್ಗೆ 5 ಗಂಟೆಯಿಂದಲೆ ಐಫೋನ್ ಸ್ಟೋರ್ ಗಳ ಮುಂದೆ ಜನ ಜಮಾವಣೆ

ಮಹಾರಾಷ್ಟ್ರ: ಐಫೋನ್ 16 ಆವೃತ್ತಿಯ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ದೆಹಲಿ ಹಾಗೂ ಮುಂಬೈನ ಐಫೋನ್ ಸ್ಟೋರ್ ಗಳಲ್ಲಿ ಮಾತ್ರ ಲಭ್ಯವಿದ್ದು, ಇದೀಗ ಈ ಫೋನ್ ಖರೀದಿಸಲು ಬೆಳಗ್ಗೆ 5 ಗಂಟೆಯಿಂದಲೆ ಜನ ಜಮಾಯಿಸಿದ್ದಾರೆ.

‘ಮೇಕ್ ಇನ್ ಇಂಡಿಯಾ’ ಐಫೋನ್ 16 ಗಾಗಿ ಮುಂಗಡ ಆರ್ಡರ್ ನಲ್ಲಿ ಏರಿಕೆ ಕಂಡಿದೆ.

ಐಫೋನ್ 16 ಪ್ರೊ ಬೆಲೆ ₹1.19 ಲಕ್ಷ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ ₹1.44ಲಕ್ಷದಿಂದ ಲಭ್ಯ’ ಎಂದು ಕಂಪನಿ ಹೇಳಿದೆ.

ಐಫೋನ್ 16 ಮಾದರಿಗೆ ದೇಶ ಸೇರಿದಂತೆ ವಿದೇಶದಲ್ಲೂ ಸಾಕಷ್ಟು ಬೇಡಿಕೆಯಿದ್ದು, ದಾಖಲೆ ಪ್ರಮಾಣದಲ್ಲಿ ಮಾರಾಟವಾಗುವ ಸಾಧ್ಯತೆಯಿದೆ. ಅಲ್ಲದೇ ಹೊಸ 16 ಸರಣಿಯು ಹಿಂದಿನ ದಾಖಲೆಗಳನ್ನು ಮುರಿಯುವುದು ಖಚಿತ ಎಂದು ವರದಿಯಾಗಿದೆ..

ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಹಾಗೂ 1 ಟಿಬಿ ಎಕ್ಸ್ಟ್ರನಲ್ ಸಾಮರ್ಥ್ಯದೊಂದಿಗೆ ಲಭ್ಯವಿದೆ. ಈವರೆಗಿನ ಐಫೋನ್‌ಗಳಲ್ಲೇ ಅತಿ ದೊಡ್ಡ ಡಿಸ್‌ಪ್ಲೇ 6.3 ಇಂಚು ಹಾಗೂ 6.9 ಇಂಚಿನ ಪರದೆಯುಳ್ಳ ಫೋನ್‌ಗಳು ಇವಾಗಿವೆ.

ಇದೇ ಮೊದಲ ಬಾರಿಗೆ ಹಿಂದಿನ ಆವೃತ್ತಿಯ ದುಬಾರಿ ಮಾದರಿಯ ಫೋನ್ ಬೆಲೆಗಿದ ಅಗ್ಗದ ಬೆಲೆಗೆ 16 ಸರಣಿಯ ಐಫೋನ್ ಪ್ರೊ ಸರಣಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.

ಭಾರತದಲ್ಲಿ ತಯಾರಾದ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ಫೋನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಐಫೋನ್ 16ರ ಬೆಲೆ ₹79,900ರಿಂದ ಆರಂಭವಾದರೆ, 16 ಪ್ಲಸ್ ಫೋನ್ ಬೆಲೆ ₹89,900ರಿಂದ ಲಭ್ಯ. ಈ ಫೋನ್‌ಗಳು 128ಜಿಬಿ, 256ಜಿಬಿ, 512ಜಿಬಿ ಎಕ್ಸ್ಟ್ರನಲ್ ಸಾಮರ್ಥ್ಯದೊಂದಿಗೆ ಲಭ್ಯ ಎಂದು ಕಂಪನಿ ಹೇಳಿದೆ.

Leave a Reply

Your email address will not be published. Required fields are marked *