ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ಟೂರ್ನಿಯ 2023 ನೇ ಸಾಲಿನ ಮಿನಿ ಹರಾಜಿನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಫೈನಲ್ ಹೀರೋ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರನ್ ನಿರೀಕ್ಷೆಯಂತೆ ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯ ಮೊತ್ತ 18.50 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು.
ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಕೆಮುರೆನ್ ಗ್ರೀನ್ 17.50 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು, ಇಂಗ್ಲೆಂಡ್ ತಂಡದ ಮತ್ತೊಬ್ಬ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ 16.50 ಕೋಟಿ ರೂಪಾಯಿ ಪಡೆಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರ್ಪಡೆಯಾದರು.
ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ರನ್ನು ಕೊಂಡುಕೊಳ್ಳಲು ರಾಜಸ್ಥಾನ ರಾಯಲ್ಸ್ ಹಾಗೂ ಹೈದರಾಬಾದ್ ಸನ್ ರೈಸರ್ಸ್ ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಕೊನೆಗೆ 13.25 ಕೋಟಿ ರೂಪಾಯಿ ಮೌಲ್ಯವನ್ನು ಪಡೆಯುವ ಮೂಲಕ ಹೈದರಾಬಾದ್ ತಂಡವನ್ನು ಕೂಡಿಕೊಂಡರು.
ಕನ್ನಡಿಗರಾದ ಮಯಾಂಕ್ ಅಗರ್ವಾಲ್ 8.25 ಕೋಟಿ (ಹೈದರಾಬಾದ್ ಸನ್ ರೈಸರ್ಸ್), ಮನೀಷ್ ಪಾಂಡೆ 2.40 ಕೋಟಿ (ಡೆಲ್ಲಿ ಕ್ಯಾಪಿಟಲ್) ಸೇರುವ ಮೂಲಕ ಈ ಬಾರಿಯೂ ಸಹ ತವರಿನ ಆರ್ ಸಿಬಿ ಬಿಟ್ಟು ಬೇರೆ ತಂಡಗಳ ಪರವಾಗಿ ಆಡುವಂತಾಗಿದ್ದು ಉತ್ತಮ ಮೌಲ್ಯವನ್ನೇ ಪಡೆದಿದ್ದಾರೆ.
ಇನ್ನುಳಿದಂತೆ ಸ್ಟಾರ್ ಬ್ಯಾಟ್ಸ್‌ಮನ್ಗಳಾದ ಅಂಜಿಕ್ಯಾ ರಹಾನೆ 50 ಲಕ್ಷ (ಸಿಎಸ್ ಕೆ), ವೆಸ್ಟ್ ಇಂಡೀಸ್ನ ಓಡಿಯನ್ ಸ್ಮಿತ್ 1 ಕೋಟಿ (ಎಸ್ ಆರ್ ಎಚ್), ನಿಕಲಸ್ ಪೂರನ್ 16 ಕೋಟಿ (ಲಕ್ನೋ), ಕ್ಲಾಸನ್ (ಎಸ್ ಆರ್ ಎಚ್), ಕೇನ್ ವಿಲಿಯಮ್ಸನ್ 2 ಕೋಟಿ (ಲಕ್ನೋ), ಆಲ್ ರೌಂಡರ್ ಜೈಸನ್ ಹೋಲ್ಡರ್ 5.5 ಕೋಟಿ (ರಾಜಸ್ಥಾನ ರಾಯಲ್ಸ್), ಸ್ಟಾರ್ ಬೌಲರ್ ಶಿವಾಮ್ ಮಾವಿ 6 ಕೋಟಿ (ಗುಜರಾತ್ ಜೈಂಟ್), ಇಂಗ್ಲೆಂಡ್ ಬೌಲರ್ ಟ್ರೋಪ್ಲೆ 1.90 ಕೋಟಿ (ಆರ್ ಸಿ ಬಿ) ತಂಡವನ್ನು ಸೇರಿಕೊಂಡರು.
ವಿಶ್ವದ ಶ್ರೇಷ್ಠ ಆಲ್ ರೌಂಡರ್ ಶಕೀಬ್ ಆಲ್ ಹಸನ್, ಬಾಂಗ್ಲಾದೇಶ ತಂಡದ ನಾಯಕ ಲಿಟನ್ ದಾಸ್, ಆಲ್ ರೌಂಡರ್ ಕ್ರಿಸ್ ಜೋರ್ಡನ್, ಸ್ಪಿನ್ನರ್ ಆಡಂ ಜಂಪಾ, ಆಡಂ ಮಿಲ್ಲ್ನೆ, ಮುರುಗನ್ ಅಶ್ವಿನ್ ಸೇರಿದಂತೆ ಹಲವಾರು ಮಂದಿ ಹರಾಜಾಗದೆ ಉಳಿದುಕೊಂಡರು.