ಏ.8ರಂದು ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ

ದೊಡ್ಡಬಳ್ಳಾಪುರ ನಗರದಲ್ಲಿ ಏ.8ರಂದು 66/11ಕೆವಿ ಅಪೇರಲ್ ಪಾರ್ಕ್ ಉಪ ವಿದ್ಯುತ್‌ ಕೇಂದ್ರದಿಂದ ಹೊರವೊಮ್ಮುವ F11-Railway Station ಫೀಡರ್‌ನ ಮಾರ್ಗದಲ್ಲಿ ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, F11-Railway Station ಫೀಡರ್‌ನ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕಾಗಿ ದೊಡ್ಡಬಳ್ಳಾಪುರ ನಗರದ ವಿದ್ಯುತ್ ಸರಬರಾಜು ಕಂಪನಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ ಕುಮಾರ್ ಹೆಚ್ ಪಿ ಅವರು ಕೋರಿದ್ದಾರೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ಸ್ಕೌಟ್‌ಕ್ಯಾಂಪ್ ರಸ್ತೆ, ರೈಲ್ವೆ ನಿಲ್ದಾಣ, ಕೆಂಪೇಗೌಡ ನಗರ, ರೈಲ್ವೆ ನಿಲ್ದಾಣ ಸರ್ಕಲ್, ಎಂ.ಎ.ಪ್ರಕಾಶ್ ಬಡಾವಣೆ, ಎಂ.ಜಿ.ಗಾರ್ಡನ್, ಶ್ರೀನಗರ, ಖಾಸ್‌ಬಾಗ್, ಚಂದ್ರಶೇಖರಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Leave a Reply

Your email address will not be published. Required fields are marked *

error: Content is protected !!