ನಾಯಕ ರೋಹಿತ್ ಶರ್ಮಾ ಹಾಗೂ ಯುವ ಆಟಗಾರ ಶುಬ್ಮಾನ್ ಗಿಲ್ ರ ಅಮೋಘ ಬ್ಯಾಟಿಂಗ್ ನೆರವಿನಿಂದ ಸೋಮವಾರ ನಡೆದ ನೇಪಾಳ ವಿರುದ್ಧದ ಪಂದ್ಯವನ್ನು ಭಾರತ ತಂಡ 10 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ನೇಪಾಳದ ಆರಂಭಿಕ ಆಟಗಾರರು ಮೊದಲ ಪವರ್ ಪ್ಲೇ ನಲ್ಲಿ ಉತ್ತಮ ಆಟ ತೋರಿಸಿದರು. ನೇಪಾಳದ ಆರಂಭಿಕ ಬ್ಯಾಟರ್ ಗಳದ ಅಶಿಫ್ ಶೇಕ್ (58) ಹಾಗೂ ಕುಶಾಲ್ ಬರ್ತೆಲ್ (38) ದಿಟ್ಟ ಹೋರಾಟದ ನೆರವಿನಿಂದ ಮೊದಲ ವಿಕೆಟ್ ಪತನಕ್ಕೆ 65 ರನ್ ಗಳಿಸಿದರು.
ಶಾರ್ಧೂಲ್ ಠಾಕೂರ್ ಇವರ ಆಟಕ್ಕೆ ಬ್ರೇಕ್ ನೀಡಿದ ನಂತರದಲ್ಲಿ ಬಂದಂತಹ ಬ್ಯಾಟರ್ ಗಳನ್ನು ಜಡೇಜಾ ತಮ್ಮ ಮಾರಕ ಸ್ಪಿನ್ ಬೌಲಿಂಗ್ ನಿಂದ ಅತಿ ಬೇಗ ಪೆವಿಲಿಯನ್ ಪೆರೇಡ್ ನಡೆಸಿದರು.
ಸೋಂಪಲ್ ಕಮಿ (48) ಬಿಟ್ಟರೆ ಉಳಿದ ಯಾವುದೇ ಬ್ಯಾಟರ್ ನಿಂದಾ ಉತ್ತಮ ರನ್ ಕಂಡುಬರಲಿಲ್ಲ. ಭಾರತದ ಪರ ರವೀಂದ್ರ ಜಡೇಜಾ ಹಾಗೂ ಸಿರಾಜ್ ತಲಾ 3 ವಿಕೆಟ್ ಹಾಗೂ ಶಮಿ, ಹಾರ್ದಿಕ, ಶಾರ್ಧುಲ್ ತಲಾ ಒಂದು ವಿಕೆಟ್ ಪಡೆದರು.
ಪಂದ್ಯದ ನಡುವೆ ಉಂಟಾದ ಮಳೆಯಿಂದ ಪಂದ್ಯವನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸಲಾಯಿತು. ಭಾರತಕ್ಕೆ ಡಿ ಎಲ್ ಎಸ್ ನಿಯಮಾನುಸಾರ ಗೆಲ್ಲಲು 147 ರನ್ ಗಳ ಸುಲಭ ಗುರಿಯನ್ನು ನೀಡಲಾಯಿತು.
ಭಾರತದ ಸ್ಫೋಟಕ ಆರಂಭಿಕ ರೋಹಿತ್ ಶರ್ಮಾ (74*) ಹಾಗೂ ಯುವ ಆರಂಭಿಕ ಶುಬ್ಮನ್ ಗಿಲ್ (67*) ಇಬ್ಬರು ನೇಪಾಳ ತಂಡದ ಬೌಲರ್ ಗಳ ಮೇಲೆ ರನ್ ನ ಮಳೆಯೇ ಸುರಿಸಿದರು. ಯಾವುದೇ ವಿಕೆಟ್ ನಷ್ಟವಿಲ್ಲದೇ ಭಾರತ ತಂಡ ಸುಲಭ ಜಯ ಪಡೆಯುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.