ಏಷಿಯಾ ಖಂಡದ ಬೃಹತ್ ಸೌರಶಕ್ತಿ ವಾಹನಗಳ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ನಿಟ್ಟೆ ಕಾಲೇಜು

ಯಲಹಂಕ : ಬೆಂಗಳೂರಿನ ನಿಟ್ಟೆ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಏಷಿಯಾ ಖಂಡದ ಬೃಹತ್ ಸೌರಶಕ್ತಿ ವಾಹನಗಳ ಸ್ವರ್ಥೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನ ಪಡೆದಿದ್ದಾರೆ. ಪೀಪಲ್ಸ್ ಚಾಯ್ಸ್ ಅವಾರ್ಡ್ ಪ್ರಶಸ್ತಿಯನ್ನ ಗೆದ್ದು ಎಲ್ಲರ ಮೆಚ್ಚಿಗೆ ಗಳಿಸಿದ ನಿಟ್ಟೆ ಇಂಜಿನಿಯರಿಂಗ್ ಕಾಲೇಜು.

ಗ್ರೇಟರ್ ನೋಯ್ಡಾದ ಗಲ್ಗೋತಿಯಾಸ್ ವಿಶ್ವವಿದ್ಯಾಲಯ ಹಾಗೂ ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ಸ್ ಸಹಯೋಗದಲ್ಲಿ ವಾರ್ಷಿಕ ಎಲೆಕ್ಚ್ರಾನಿಕ್ ಸೋಲಾರ್ ವಾಹನಗಳ ರಾಷ್ಟ್ರೀಯ ಸ್ಪರ್ಧೆಯನ್ನ(ESVC-2023) ಅಯೋಜನೆ ಮಾಡಲಾಗಿತ್ತು.

ಇದು ಏಶಿಯಾ ಖಂಡದ ಅತ್ಯಂತ ಬೃಹತ್ ಆದ ಸೌರಶಕ್ತಿ ವಾಹನಗಳ ಸ್ಫರ್ಧೆಯಾಗಿದೆ. ಈ ಸ್ವರ್ಥೆಯಲ್ಲಿ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ ವಾಹನ ಪ್ರದರ್ಶನ ನಡೆಯಿತು. ನಿಟ್ಟೆ ವಿದ್ಯಾರ್ಥಿಗಳ ವಾಹನಕ್ಕೆ ಪೀಪಲ್ಸ್ ಚಾಯ್ಸ್ ಅವಾರ್ಡ್ (ವೀಕ್ಷಕರ ಆಯ್ಕೆ ಪ್ರಶಸ್ತಿ) ಸಿಕ್ಕಿರುವುದು ವಿದ್ಯಾರ್ಥಿಗಳು ಶಿಕ್ಷಕರ ಸಂತಸಕ್ಕೆ ಕಾರಣವಾಗಿದೆ.

ಸೌರಶಕ್ತಿಯ ವಾಹನ ನಿರ್ಮಾಣದ ಹೊಣೆಯನ್ನ ಶಿಕ್ಷಕ-ವಿದ್ಯಾರ್ಥಿ ಒಕ್ಕೂಟ ಟೀಂ ಹೋರಸ್ ತೆಗೆದುಕೊಂಡಿತ್ತು, ಪೀಪಲ್ಸ್ ಚಾಯ್ಸ್ ಅವಾರ್ಡ್ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ವಿನ್ಯಾಸ ಪ್ರಶಸ್ತಿ, ಅತ್ಯುತ್ತಮ ಔದ್ಯಮಿಕ ಪ್ರಶಸ್ತಿ ಹಾಗೂ ಭವಿಷ್ಯದ ಭರವಸೆಯ ಪ್ರಶಸ್ತಿಗಳನ್ನು ಸಹ ಪಡೆದಿದೆ. ಪ್ರಶಸ್ತಿ ಪಡೆದ ತಂಡಕ್ಕೆ ಅಭಿವಂದನೆ ಸಲ್ಲಿಸಲು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಮಾರಂಭವನ್ನ ಆಯೋಜನೆ ಮಾಡಲಾಗಿತ್ತು.

Leave a Reply

Your email address will not be published. Required fields are marked *