ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಚಿಕ್ಕಜಾಲ ಬಳಿ ತಡರಾತ್ರಿ ಸುಮಾರು 1ಗಂಟೆಯಲ್ಲಿ ಹಿಟ್ ಅಂಡ್ ರನ್ ಆಗಿದ್ದು, ಹಿಟ್ ಅಂಡ್ ರನ್ ಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.
ರೋಹಿತ್ (22), ಸುಚಿತ್ (22), ಹರ್ಷಾ (22) ಮೃತ ವಿದ್ಯಾರ್ಥಿಗಳು.
ಬೈಕ್ ಸವರಾರು ದೇವನಹಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದರು. ಈ ಮೂವರು ವಿದ್ಯಾರ್ಥಿಗಳು ಜಿಕೆವಿಕೆಯಲ್ಲಿ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದರು.
ಅಪಘಾತದ ರಭಸಕ್ಕೆ ಹೆದ್ದಾರಿಯಲ್ಲೆ ಮೃತ ದೇಹಗಳು ನಜ್ಜು ಗುಜ್ಜಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದು, ಅಪಘಾತವೆಸಿಗಿ ಪರಾರಿಯಾದ ವಾಹನ ಹಾಗೂ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರುನಗರ ಜಿಲ್ಲೆ ಉತ್ತರ ತಾಲೂಕಿನ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.