ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಗಡೆ ಬರ್ತಿದ್ದ ಪ್ರಯಾಣಿಕನ ಟ್ರಾಲಿಯಲ್ಲಿ ಕೆಜಿ ಕೆಜಿ ಚಿನ್ನ ಪತ್ತೆಯಾಗಿದೆ.
ಕಸ್ಟಮ್ಸ್ ಅಧಿಕಾರಿಗಳ ಕೈಗೆ ತಗಲಾಕ್ಕೊಳ್ಳುವ ಭಯದಿಂದ ಖತರ್ನಾಕ್ ಪ್ರಯಾಣಿಕ ಬೇರೆಯವರ ಟ್ರಾಲಿಗೆ ಚಿನ್ನ ಹಾಕಿದ್ದಾನೆ.
ದುಬೈನಿಂದ ಬಂದಿದ್ದ ಕೋ ಪ್ಯಾಸೆಂಜರ್ ಲಗೇಜ್ ಟ್ರಾಲಿಗೆ ಚಿನ್ನದ ಬ್ಯಾಗ್ ಹಾಕಿ ಎಸ್ಕೇಪ್ ಆಗಿದ್ದಾನೆ. ಬರೋಬ್ಬರಿ 3.5 ಕೆಜಿ ಚಿನ್ನ ಬಿಸ್ಕೆಟ್ ಗಳಿದ್ದ ಬ್ಯಾಗ್ ಇಟ್ಟು ಹೋಗಿದ್ದಾನೆ. ಟ್ರಾಲಿ ತಳ್ಳಿಕೊಂಡು ಚೆಕಿಂಗ್ ಕಡೆ ಬರುವಾಗ ಟ್ರಾಲಿ ಬ್ಯಾಗ್ ನಿಂದ ಚಿನ್ನ ಹೊರಗಡೆ ಬಿದ್ದಿದೆ. ಪ್ರಯಾಣಿಕ ತನ್ನ ಟ್ರಾಲಿಯಲ್ಲಿ ಚಿನ್ನದ ಬ್ಯಾಗ್ ಕಂಡು ಕಂಗಾಲಾಗಿದ್ದಾನೆ. ಕೂಡಲೆ ಚಿನ್ನದ ಬ್ಯಾಗ್ ಸಮೇತ ಏರ್ಪೋಟ್ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾನೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ಬೆಲೆ ಬಾಳುವ 3.5 ಕೆಜಿ ಚಿನ್ನ ಪತ್ತೆಯಾಗಿದೆ.