ಏಡ್ಸ್ ರೋಗವು ಸ್ಪರ್ಶ, ಗಾಳಿ, ನೀರಿನಿಂದ ಬರುವುದಿಲ್ಲ- ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೃಷ್ಣ ಲಕ್ಕಾರೆಡ್ಡಿ

ಏಡ್ಸ್ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನಾಯಕತ್ವ, ಅಂತಾರಾಷ್ಟ್ರೀಯ ಸಹಕಾರ ಮತ್ತು ಮಾನವ ಹಕ್ಕುಗಳ ಆಧಾರಿತ ವಿಧಾನಗಳನ್ನು ಉತ್ತೇಜಿಸುವುದು ಎಂದು ಪ್ರಭಾರ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಕೃಷ್ಣ ಲಕ್ಕಾರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
2025ರ ವಿಶ್ವ ಏಡ್ಸ್ ದಿನಾಚರಣೆಯ ಮುಖ್ಯ ಘೋಷ ವಾಕ್ಯವೆಂದರೆ ಅಡೆತಡೆಗಳನ್ನು ನಿವಾರಿಸುವುದು ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು ಎಂದರು.

ಎ.ಆರ್‌.ಟಿ ಅಧಿಕಾರಿಗಳಾದ ಡಾ. ನಿರಂಜನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಏಡ್ಸ್ ಆರಂಭಿಕ ಹಂತದಲ್ಲಿ ಜ್ವರ, ಗಂಟಲು ನೋವು ಸ್ನಾಯು ನೋವು, ಊದಿಕೊಂಡ ದುಗ್ದ್ ರಸ, ಗ್ರಂಥಿಗಳು ಕಂಡು ಬರಬಹುದು, ಏಡ್ಸ್ ಪ್ರಾರಂಭದ ಹಂತದಲ್ಲಿ ತೂಕ ನಷ್ಟ ದೀರ್ಘಕಾಲದ ಅತಿಸಾರ, ತೀವ್ರ ಆಯಾಸ, ರಾತ್ರಿ ಬೆವರುವಿಕೆ ಮತ್ತು ಸಣ್ಣ ಸೋಂಕುಗಳು ಕೂಡ ಗಂಭೀರ ಆಗಬಹುದು ಎಂದರು.

ಡ್ಯಾಪ್ಕೋ ಮತ್ತು ಕ್ಷಯ ವಿಭಾಗದ ಡಾ. ನಾಗೇಶ್ ಎಸ್ ಮಾತನಾಡಿ, ಏಡ್ಸ್ ಕುರಿತಾಗಿ ಮೂಡನಂಬಿಕೆಗಳಿಂದ ದೂರ ಇರಬೇಕು, ಏಡ್ಸ್ ರೋಗವು ಕೀಟಗಳಿಂದ, ಸ್ಪರ್ಶದಿಂದ, ಗಾಳಿ, ನೀರು ಸಾಮಾಜಿಕ ಸಂಪರ್ಕದ ಮೂಲಕ ಹರಡುವುದಿಲ್ಲ, ಏಡ್ಸ್ ರೋಗವು ರಕ್ತ, ವೀರ್ಯ, ಯೋನಿ ಸ್ರಾವ ಮತ್ತು ತಾಯಿಯ ಹಾಲಿನ ಮೂಲಕ ಹರಡುತ್ತದೆ, ನಿಖರವಾದ ಮಾಹಿತಿಯನ್ನು ಪಡೆಯುವುದು ಮತ್ತು ಹರಡುವಿಕೆಯನ್ನು ತಡೆಯುವುದು ಏಡ್ಸ್ ದಿನದ ಮುಖ್ಯ ಉದ್ದೇಶ ಎಂದರು.

ಪ್ರಾಂಶುಪಾಲರಾದ ಡಾ. ಗೌರಪ್ಪ ಎಂ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ವಹಿಸಿದ್ದರು.

ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ. ಚೈತನ್ಯ ಇಂದ್ರಾಣಿ, ಡಾ. ಎಂ. ಚಿಕ್ಕಣ್ಣ, ಶ್ರೀಮತಿ ಜಮುನಾ ಎಲ್. ಕೆ, ಶ್ರೀಮತಿ ಸ್ವಪ್ನ ಎ, ಶ್ರೀ ಹರೀಶ್, ರವೀಶ್, ಬಾಬು ಎಸ್ ರವರನ್ನು
ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶಾರದಾ ನಾಗನಾಥ್, ಉಪ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ರಮೇಶ್, ಕಾಲೇಜಿನ ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಎಂ ಚಿಕ್ಕಣ್ಣ, ವಿಭಾಗದ ಮುಖ್ಯಸ್ಥರುಗಳಾದ ಸಿ.ಪಿ ಪ್ರಕಾಶ್, ಚೈತ್ರ, ಆರ್.ಆರ್.ಸಿ ಮತ್ತು ವೈ.ಆರ್.ಸಿ ಸಂಚಾಲಕರಾದ ಕೀರ್ತನ ಪ್ರಾಧ್ಯಾಪಕರಾದ ದಿವ್ಯ, ಲಕ್ಷ್ಮೀಶ, ಆದೇಶ್, ವರುಣ್, ಸಿಬ್ಬಂದಿಗಳಾದ ರಮೇಶ್, ರವಿ ಮತ್ತಿತರರು ಹಾಜರಿದ್ದರು.

Ramesh Babu

Journalist

Recent Posts

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ–ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್…

5 hours ago

ಸೆ.28ರಿಂದ 30ರವರೆಗೆ ಬ್ಯಾಂಕ್ ನೌಕರರ ಮುಷ್ಕರ: ಭಾನುವಾರ ಬ್ಯಾಂಕ್‌ ಸೇವೆ ಲಭ್ಯ

ಬ್ಯಾಂಕ್ ನೌಕರರ ಒಕ್ಕೂಟವು ಸೆ.28ರಿಂದ 30ರವರೆಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ…

19 hours ago

ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ- ಸಚಿವ ಎನ್. ಚಲುವರಾಯಸ್ವಾಮಿ ಭರವಸೆ*

ಜನರು ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು‌ ಎಂಬ ಉದ್ದೇಶದಿಂದ ನನಗಿರುವ ಅಧಿಕಾರವನ್ನು ಬಳಸಿಕೊಂಡು ನಿಮ್ಮ ಸೇವೆ ಮಾಡುತ್ತಿದ್ದೆನೆ ಎಂದು ಮಂಡ್ಯ…

20 hours ago

ಹೈನುಗಾರಿಕೆಗೆ ಅಜೋಲಾ ಆಸರೆ: ಹಸಿರು ಮೇವಿನ ಕೊರತೆಗೆ ಪರ್ಯಾಯ: ಹಾಲು ನೀಡುವ ರಾಸುಗಳಿಗೆ ಪೌಷ್ಟಿಕ ಪೂರಕ ಆಹಾರ

ಬೆಂಗಳೂರು ಗ್ರಾಮಾಂತರ: ಮಳೆಯ ಕೊರತೆ ಹಾಗೂ ಹಸಿರು ಮೇವಿನ ಅಭಾವದಿಂದ ಜಾನುವಾರು ಸಾಕಾಣಿಕೆದಾರರು ಎದುರಿಸುತ್ತಿರುವ ಸಂಕಷ್ಟಕ್ಕೆ ಪರ್ಯಾಯವಾಗಿ, ಜಾನುವಾರುಗಳಿಗೆ ಸ್ಥಳೀಯವಾಗಿಯೇ…

1 day ago

ಸೆ. 28ಕ್ಕೆ ಅವತಿ ಬೆಟ್ಟದಲ್ಲಿ “ವಿಶ್ವ ಪ್ರವಾಸೋದ್ಯಮ ದಿನಾಚರಣೆ-2026″

ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ದೇವನಹಳ್ಳಿ ತಾಲ್ಲೂಕಿನ ಅವತಿಯ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ…

2 days ago

ಮಾದಕ ವಸ್ತುಗಳ (ಡ್ರಗ್ಸ್) ಸಂಪೂರ್ಣ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕರ್ತವ್ಯ ನಿರ್ವಹಿಸಿ – ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ

ಜಿಲ್ಲೆಯಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಹಾವಳಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೈಜೋಡಿಸಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ…

2 days ago