ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾ ತಲುಪಿದ ಭಾರತ ತಂಡ

ನವದೆಹಲಿ : ತವರಿನಲ್ಲಿ ನಡೆಯುವ ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ ಗೆ ಈಗಾಗಲೇ ತಯಾರಿ ಆರಂಭಿಸಿರುವ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ತಂಡ ಢಾಕಾಗೆ ಪಯಣ ಬೆಳೆಸಿದೆ.

ಡಿಸೆಂಬರ್ 4 ರಿಂದ ಆರಂಭವಾಗಲಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲು ಬಿಸಿಸಿಐ ಈಗಾಗಲೇ ಹದಿನೈದು ಸದಸ್ಯರ ಪಟ್ಟಿಯನ್ನು ಪ್ರಕಟಿಸಿದ್ದು ನ್ಯೂಜಿಲೆಂಡ್ ವಿರುದ್ದ ವಿಶ್ರಾಂತಿ ಪಡೆದಿದ್ದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಕೆ. ಎಲ್. ರಾಹುಲ್ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಭಾಗವಹಿಸಲು ತಂಡಕ್ಕೆ ವಾಪಸ್ ಆಗಿದ್ದಾರೆ.

ತಂಡದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್, ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ರಜತ್ ಪಾಟೀದರ್, ಆಲ್ ರೌಂಡರ್ ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಸಿರಾಜ್, ಕುಲದೀಪ್ ಸೇನ್, ಶಾದುಲ್ ಟಾಕೂರ್, ದೀಪಕ್ ಚಹರ್, ಇಶಾನ್ ಕಿಶನ್, ವಾಶಿಂಗ್ಟನ್ ಸುಂದರ್, ಶಾಬಾಜ್ ಅಹಮದ್, ರಾಹುಲ್ ತ್ರಿಪಾಠಿ ತಂಡದಲ್ಲಿದ್ದಾರೆ.

ತವರಿನಲ್ಲಿ ಸದಾ ಅಚ್ಚರಿ ಫಲಿತಾಂಶ ನೀಡುವ ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸುವಂತಿಲ್ಲ, ಏಕದಿನ ಆಲ್ ರೌಂಡರ್ ನಂ 1 ಸ್ಥಾನದ ಆಟಗಾರ, ಸ್ಟಾರ್ ಆಲ್ ರೌಂಡರ್ ಶಕೀಬ್ ಆಲ್ ಹಸನ್ ತಂಡಕ್ಕೆ ವಾಪಸ್ ಮರಳಿದ್ದು ಬ್ಯಾಟ್ಸ್‌ಮನ್ಗಳಾದ ಲಿಟ್ಟಲ್ ದಾಸ್ ಹಾಗೂ ಮುಸ್ತಿಪರ್ ರಹೀಮ್, ಬೌಲರ್‌ಗಳಾದ ಮುಸ್ತಫಿಯರ್ ರೆಹಮಾನ್ ಹಾಗೂ ಟಸ್ಕಿನ್ ಅಹಮದ್ ಉತ್ತಮ ಫಾರ್ಮ್ ನಲ್ಲಿದ್ದು ಭಾರತಕ್ಕೆ ಸವಾಲಾಗಬಹುದು.

Leave a Reply

Your email address will not be published. Required fields are marked *