ಎಸ್ ಟಿ ಸಮುದಾಯವು ಸಮಾಜದಲ್ಲಿ ಇನ್ನೂ ಹಿಂದುಳಿದಿದೆ. ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಎಸ್ ಟಿ ಸಮಿತಿ ಶ್ರಮಿಸಲಿದೆ ಎಂದು ಸಮಿತಿಯ ನೂತನ ರಾಜ್ಯಾಧ್ಯಕ್ಷ ಮುನಿರಾಜು (ಚಿಕ್ಕಪ್ಪಿ) ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಎಸ್ ಟಿ ಸಮಿತಿಯನ್ನ ಅಧಿಕೃತವಾಗಿ ಘೋಷಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಸಂಘಟನೆಗಳಿದ್ದಾಗಿಯೂ ಸಹ ವಾಲ್ಮೀಕಿ ನಾಯಕ ಸಮುದಾಯದ ಜನತೆ ಅನ್ಯರಿಂದ ಶೋಷಣೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವುದನ್ನು ತಪ್ಪಿಸಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಮುದಾಯದ ಜನರನ್ನು ಸ್ವಾವಲಂಬಿಗಳಾಗಿ ಜೀವಿಸಲು ಅವಕಾಶ ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿದ ಕಾರ್ಯಕ್ರಮಗಳ ಮತ್ತು ಯೋಜನೆಗಳ ಪೂರ್ಣ ಪ್ರಯೋಜನಗಳನ್ನು ವಾಲ್ಮೀಕಿ ಜನಾಂಗದ ಜನರಿಗೆ ದೊರಕಿಸುವ ಅಗತ್ಯವಿದ್ದು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ಮತ್ತು ಸ್ವ-ಸಹಾಯ ಸಂಘಗಳ ಸಹಾಯದಿಂದ ಜನಾಂಗದ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಎಂದು ತಿಳಿಸಿದರು.
ನಮ್ಮ ನಾಯಕ ಸಮಾಜದ ವಿದ್ಯಾರ್ಥಿಗಳು, ನಿರುದ್ಯೋಗಿಗಳು,ಅಂಗವಿಕಲರು ಮತ್ತು ವಿಧವೆಯರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಜನಾಂಗದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿಸಿಕೊಂಡು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ನಂತರ ರಾಜ್ಯಉಪಾಧ್ಯಕ್ಷ ಕೇಬಲ್ ರಾಮಚಂದ್ರ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ಜನರು ವಾಸಿಸುತ್ತಿರುವ ಹಳ್ಳಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಸರ್ಕಾರಗಳು ವಿವಿಧ ಇಲಾಖೆಗಳ ಅಡಿಯಲ್ಲಿ ಅನೇಕ ಯೋಜನೆಗಳನ್ನು ನಮ್ಮ ಸಮುದಾಯಕ್ಕೆ ನೀಡುತ್ತಿದೆ. ಆದರೆ ಅರ್ಹರಿಗೆ ತಲುಪುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ದೊರಕಬೇಕಾದ ಸೌಲಭ್ಯ ಕೆಲ ರಾಜಕಾರಣಿಗಳ ಹಿಂಬಾಲಕರಿಗೆ ಸೀಮಿತವಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಪ್ರಮಾಣಿಕ ಹೋರಾಟ ನಡೆಸಿ ಅರ್ಹರಿಗೆ ಯೋಜನೆ ತಲುಪಿಸುತ್ತೇವೆ.ಈಗಾಗಲೆ ಅಸ್ಥಿತ್ವದಲ್ಲಿರುವ ಸಂಘಟನೆಗಳ ಸಲಹೆ ಸಹಕಾರದೊಂದಿಗೆ, ನಮ್ಮ ಸಂಘದ ಧೈಯೋದ್ದೇಶಗಳ ಈಡೇರಿಕೆಗೆ ಅಗತ್ಯವಾದ ಮತ್ತು ಸೂಕ್ತವಾದ ಭೂಮಿಕೆಯನ್ನು ಸಿದ್ಧಪಡಿಸಲು ರಾಜ್ಯಾದ್ಯಂತ ಪ್ರವಾಸವನ್ನು ಕೈಗೊಂಡು, ಕಾರ್ಯಕರ್ತರನ್ನು ಸಜ್ಜುಗೊಳಿಸಲಿದ್ದೇವೆ ಎಂದು ತಿಳಿಸಿದರು.
ಕಾನೂನು ಸಲಹೆಗಾರ ನ್ಯಾಯವಾದಿ ಅಂಬರೀಶ್ ಮಾತನಾಡಿ ಮಹರ್ಷಿ ವಾಲ್ಮೀಕಿ,ಮದಕರಿ ನಾಯಕ ರಂತಹ ಮಹಾನ್ ಪುರುಷರನ್ನು ಇತಿಹಾಸಕ್ಕೆ ಕೊಡುಗೆ ನೀಡಿದ ಜನಾಂಗ ನಮ್ಮದು. ಆದರೆ ಆಧುನಿಕತೆ ಬೆಳೆದರು ನಮ್ಮ ಸಮಾಜಕ್ಕೆ ಸಿಗಬೇಕಾದ ಗೌರವ , ಸೌಲಭ್ಯಗಳು ಸಿಗುತ್ತಿಲ್ಲ . ನಮ್ಮ ಸಮುದಾಯದ ಅಥವಾ ಯಾವುದೇ ಸಮುದಾಯದ ಜನತೆಗೆ ಅನ್ಯಾಯವಾದಲ್ಲಿ ನಮ್ಮ ಸಮಿತಿ ಆವರ ದ್ವನಿಯಾಗಿ ನಿಲ್ಲಲಿದೆ ಈ ರೀತಿಯ ಘಟನೆಗಳು ಎದುರಾದಲ್ಲಿ ನಮ್ಮ ಸಂಘದವತಿಯಿಂದ ಉಚಿತವಾಗಿ ಕಾನೂನು ನೆರವನ್ನು ನೀಡಲಾಗುವುದು ಎಂದರು.
ಈ ವೇಳೆ ಈ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಖಜಾಂಚಿ ರಾಜಣ್ಣ, ರಾಜ್ಯ ಸದಸ್ಯರಾದ ರಾಜಣ್ಣ, ರಘು, ನವೀನ್ ಕುಮಾರ್ ಉಪಸ್ಥಿತರಿದ್ದರು.
ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು…
ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…
ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…
ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…
ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…
ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…