ಕೋಲಾರ: ಎಸ್.ಎಸ್.ಎಲ್.ಸಿ ಅನುತ್ತೀರ್ಣ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಎದುರಿಸಲು ಸಿದ್ಧರಾಗಿ ಶ್ರದ್ಧೆಯಿಂದ ಉಳಿದ ಸಮಯವನ್ನು ಓದಿನ ಕಡೆಗೆ ಗಮನ ಕೊಟ್ಟಾಗ ಮಾತ್ರವೇ ಗುರಿ ಸಾಧಿಸಲು ಸಾಧ್ಯವಾಗುತ್ತದೆ ತಾವುಗಳು ಅನುತ್ತೀರ್ಣ ವಿದ್ಯಾರ್ಥಿಗಳೆಂಬ ಕೀಳರಿಮೆಯನ್ನು ಮನಸ್ಸಿಯಿಂದ ದೂರ ಮಾಡಿಕೊಳ್ಳಿ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ನಗರದಲ್ಲಿ ಗುರುವಾರ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಹಾಗೂ ಕೌಶಲ್ಯ ತರಬೇತಿ ಸಂಸ್ಥೆ ವತಿಯಿಂದ ಎಸ್.ಎಸ್ ಎಲ್ ಸಿ ಅನುತ್ತೀರ್ಣ ವಿಧ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಅನುತ್ತೀರ್ಣ ವಿದ್ಯಾರ್ಥಿಗಳಿಗೂ ಬದುಕು ರೂಪಿಸಬೇಕು ಎಂಬ ಹಿನ್ನೆಲೆಯಲ್ಲಿ ಇನ್ನೂ ಉಳಿದ ಸಮಯದಲ್ಲಿ ಉಚಿತ ತರಗತಿ ನಡೆಸಿ ವಿದ್ಯಾರ್ಥಿಗಳಿಗೆ ಬದುಕು ರೂಪಿಸಲು ಹೊರಟಿದ್ದಾರೆ ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗುವ ಮೂಲಕ ಈ ಸಂಸ್ಥೆಗೆ ಹಾಗೂ ತಮ್ಮ ಭವಿಷ್ಯಕ್ಕೆ ಕೊಡುಗೆ ನೀಡಬೇಕು ಎಂದರು.
ಕೋಲಾರ ಜಿಲ್ಲೆಯು ಫಲಿತಾಂಶದಲ್ಲಿ ರಾಜ್ಯಕ್ಕೆ 14ನೇ ಸ್ಥಾನವನ್ನು ಪಡೆಯಲಾಗಿದೆ 68% ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಉಳಿದ 32 % ಅನುತ್ತೀರ್ಣರಾದ ವಿಧ್ಯಾರ್ಥಿಗಳ ಭವಿಷ್ಯವನ್ನು ಕಾಣಬೇಕಾಗಿದೆ ಆಸಕ್ತಿಯಿಂದ ಕಲಿತಾಗ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಅನುತ್ತೀರ್ಣ ವಿದ್ಯಾರ್ಥಿಗಳು ಸಹ ವಿದ್ಯಾಭ್ಯಾಸ ಪಡೆಯಲೇಬೇಕು ಎನ್ನುವ ಮನಸ್ಥಿತಿ ಬರಬೇಕು ಸಮಾಜದಲ್ಲಿ ಶಿಕ್ಷಣದಲ್ಲಿ ಎಡವಿದ ಸಾವಿರಾರು ವಿಧ್ಯಾರ್ಥಿಗಳು ಸಾಧಕರಾಗಿ ಹೊರ ಹೊಮ್ಮಿದ್ದಾರೆ ಅವರ ಜೀವನ ನಮಗೆ ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಂ ಚಂದ್ರಪ್ಪ ಮಾತನಾಡಿ ವಿಧ್ಯಾರ್ಥಿಗಳು ಶಿಕ್ಷಣ ಪಡೆಯುವ ಹಂತದಲ್ಲಿ ಸಣ್ಣ ಅಡೆತಡೆಯು ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಜ್ಞಾನರ್ಜನೆಯತ್ತ ಒತ್ತು ನೀಡಿ ಶಿಕ್ಷಣದಲ್ಲಿ ಎಡವದೇ ಮುಂದೆ ಸಾಗಬೇಕು. ಅನುತ್ತೀರ್ಣತೆ ಬದುಕಿನ ಅಂತ್ಯವಲ್ಲ. ಎಷ್ಟೇ ಬಾರಿ ಶಿಕ್ಷಣದಲ್ಲಿ ಎಡವಿದರೂ ಮುಂದೊಂದು ದಿನ ಯಶಸ್ವಿ ಯಾಗಬಹುದು ಎಂಬ ಛಲ ನಿಮ್ಮಲ್ಲಿರಲಿ, ಓದುವ ಹವ್ಯಾಸ ನಿರಂತರವಾಗಿರಲಿ ಗುರಿಯೇ ನಮ್ಮಗೆಲ್ಲ ಮುಖ್ಯವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಆರ್.ಡಿ.ಸಿ ಕೌಶಲ್ಯ ಸಂಸ್ಥೆಯ ನಿರ್ದೇಶಕ ಎಂ.ವಿ ನಾರಾಯಣಸ್ವಾಮಿ ಮಾತನಾಡಿ, ಸುಮಾರುವ 16 ವರ್ಷಗಳಿಂದ ನಮ್ಮ ಸಂಸ್ಥೆಯು ವಿವಿಧ ಕೋರ್ಸ್ ಗಳಲ್ಲಿ ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗ ಅವಕಾಶಗಳನ್ನು ಸಂಸ್ಥೆ ಮಾಡಿಕೊಂಡು ಬಂದಿದೆ ಶಿಕ್ಷಣವೇ ಅಭಿವೃದ್ಧಿಯ ಉದ್ದೇಶದಿಂದ ಉಚಿತವಾಗಿ ಅನುತ್ತೀರ್ಣ ವಿಧ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸಿ ಎಲ್ಲರೂ ಪಾಸ್ ಆಗಿ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸಂಘದ ತಾಲೂಕು ಅಧ್ಯಕ್ಷ ರಮೇಶ್ ಗೌಡ, ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್ ಶಿವಕುಮಾರ್, ತಾಲೂಕು ಅಧ್ಯಕ್ಷ ಕೆ.ನಾರಾಯಣರೆಡ್ಡಿ, ಸಂಸ್ಥೆಯ ಚೌಡಪ್ಪ, ಎಂ.ಶಂಕರಪ್ಪ ಮುಂತಾದವರು ಇದ್ದರು.