ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 96.48 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 4 ನೇ ಸ್ಥಾನ ಗಳಿಸಿದೆ. ಜಿಲ್ಲೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪರೀಕ್ಷೆ ಬರೆದ 13430 ವಿದ್ಯಾರ್ಥಿಗಳಲ್ಲಿ 12988 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
6632 ಕ್ಕೆ 6499 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 98.03 ರಷ್ಟು ಫಲಿತಾಂಶದೊಂದಿಗೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಬಾಲಕರು 6798 ಕ್ಕೆ 6489 ಉತ್ತೀರ್ಣತೆ ಪಡೆದು ಶೇ.95.45 ರಷ್ಟು ಫಲಿತಾಂಶ ಪಡೆದಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶಿವಾನಿ.ಹೆಚ್.ವಿ ಅವರು 625ಕ್ಕೆ 617 ಅಂಕ ಗಳಿಸಿ ಸರ್ಕಾರಿ ಶಾಲೆಗಳಲ್ಲಿ ಜಿಲ್ಲೆಗೆ ಮೊದಲಿಗರೆನಿಸಿದ್ದಾರೆ.
ಮ್ಯಾನೇಜ್‌ಮೆಂಟ್‌ವಾರು ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಶೇ. 95.05 ರಷ್ಟು, ಅನುದಾನಿತ ಶಾಲೆಗಳು ಶೇ. 93.53 ರಷ್ಟು ಮತ್ತು ಅನುದಾನರಹಿತ ಪ್ರೌಢಶಾಲೆಗಳು ಶೇ. 98.75 ರಷ್ಟು ಫಲಿತಾಂಶ ಗಳಿಸಿವೆ.
ಇದೇ ಮೊದಲ ಬಾರಿಗೆ ಹೊಸಕೋಟೆ ತಾಲ್ಲೂಕು ಶೇ. 98.75 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಎನಿಸಿದೆ. ನಂತರ ದೇವನಹಳ್ಳಿ ಶೇ. 97.79 ರಷ್ಟು, ದೊಡ್ಡಬಳ್ಳಾಪುರ ಶೇ. 95.19 ರಷ್ಟು ಹಾಗೂ ನೆಲಮಂಗಲ ತಾಲ್ಲೂಕು ಶೇ. 94.17 ರಷ್ಟು ಫಲಿತಾಂಶ ಪಡೆದಿವೆ.