ಎಸ್ಮಾ ಜಾರಿ ಮಾಡಿದರೂ ಬಗ್ಗಲ್ಲ.. ಜಗ್ಗಲ್ಲ.. ಡಿಸಿಎಂ ಡಿಕೆಶಿಗೆ ಶಾಸಕ ಧೀರಜ್ ಮುನಿರಾಜು ಸವಾಲ್

ಬೆಂಗಳೂರಿನ ಕಸವನ್ನು ವಿಲೇವಾರಿ ಮಾಡಲು ಮಹದೇವಪುರ ಮತ್ತು ಮೀಟಗಾನಹಳ್ಳಿಯ ವಿಲೇವಾರಿ ಘಟಕಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಅಲ್ಲಿನ ಕಸದ ಲಾರಿಗಳು ದೊಡ್ಡಬಳ್ಳಾಪುರದ ಎಂಎಸ್ ಜಿಪಿ ಘಟಕದತ್ತ ಮುಖಮಾಡಿದ್ದವು. ವಿಷಯ ತಿಳಿದ ಇಲ್ಲಿನ ಸುತ್ತಮುತ್ತಲಿಮ ಗ್ರಾಮಸ್ಥರು ಹೆಚ್ಚುವರಿಯಾಗಿ ಬಂದ ಲಾರಿಗಳನ್ನು ತಡೆದು ವಾಪಸ್ ಕಳಿಸಿದ್ದರು. ಗ್ರಾಮಸ್ಥರಿಗೆ ಶಾಸಕ ಧೀರಜ್ ಮುನಿರಾಜು ಕೂಡ ಸಾಥ್ ನೀಡಿ ಕಸದ ಲಾರಿಗಳನ್ನು ವಾಪಸ್ ಕಳಿಸುವಲ್ಲಿ ಯಶಸ್ವಿಯಾಗಿದ್ದರು.

ಬುಧವಾರ ಕೂಡ ನಿಗದಿತ 70 ಲಾರಿಗಳು ಬಿಟ್ಟು ಹೆಚ್ಚುವರಿ ಲಾರಿಗಳು ಬರುವ ಆತಂಕದಿಂದ ಇಲ್ಲಿನ ಗ್ರಾಮಸ್ಥರು ಎಂಎಸ್ಜಿಪಿ ಘಟಕದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಇಡೀ ದಿನ ಗ್ರಾಮಸ್ಥರು ಬಂದು ಹೋಗುವ ಲಾರಿಗಳ ಮೇಲೆ ನಿಗಾವಹಿಸಿದ್ದರು.

ಸ್ಥಳಕ್ಕೆ ಡಿವೈಎಸ್ಪಿ ಬೇಟಿ ಪರಿಶೀಲನೆ:

ಎಂಎಸ್ ಜಿಪಿ ಘಟಕದ ಬಳಿಯ ಚಿಕ್ಕಮಂಕಳಾಲದ ಬಳಿ ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಯಿತು. ಎಂಎಸ್ಜಿಪಿ ಘಟಕದ ಲಾರಿಗಳ ದಾಖಲಾತಿಗಳನ್ನ ಪರಿಶೀಲಿಸಿ ಒಳಗೆ ಬಿಡಲಾಯಿತು. ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ದೊಡ್ಡಬೆಳವಂಗಲ ಹೋಬಳಿ ಇನ್ಸ್ಪೆಕ್ಟರ್ ಕಲ್ಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಎಂಎಸ್ಜಿಪಿ ಘಟಕದ ಎಂ.ಡಿ ಪ್ರವೀಣ್ ಗೌಡ ಜೊತೆ ಡಿವೈಎಸ್ಪಿ ಪಾಂಡುರಂಗ ದೂರವಾಣಿ ಕರೆ ಮಾಡಿ ಲಾರಿಗಳ ಸಂಖ್ಯೆ, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಹೆಚ್ಚುವರಿ ಲಾರಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಎಎಸ್ಐ ನೇತೃತ್ವದಲ್ಲಿ ಬಿಗಿ ಭದ್ರತೆಗೆ ಸೂಚಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶಾಸಕ ಧೀರಜ್ ತಿರುಗೇಟು:

ಅನುದಾನ ನೀಡಿಲ್ಲವೆಂದು ಹೇಳಿ ಕಸದ ಲಾರಿಗಳಿಗೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಶಾಸಕ ಧೀರಜ್ ಮುನಿರಾಜು ಸವಾಲು ಹಾಕಿದ್ದಾರೆ. ದೊಡ್ಡಬಳ್ಳಾಪುರಕ್ಕೆ ಕಸದ ಘಟಕದ ಪರಿಣಾಮವಾಗಿ 10 ಕೋಟಿ ಕಸದ ಅನುದಾನವನ್ನ ಮೀಸಲಿರಿಸಿದ್ದಾರೆ. ಆದರೆ ನಾನು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದಂತೆ ಅನುದಾನಕ್ಕೆ ಬೇಡಿಕೆ ಇಟ್ಟಿಲ್ಲ. ಕೇಳಿಲ್ಲ.. ಮುಂದೆಯೂ ಕೇಳಲ್ಲ.. ಇದರ ಬಗ್ಗೆ ನನ್ನ ಮನವಿ ಪತ್ರವಾಗಲಿ, ದೂರವಾಣಿ ಕರೆ ದಾಖಲೆಗಳಾಗಲಿ ಇದ್ದರೆ ಬಿಡುಗಡೆ ಮಾಡಲಿ ನಾನು ಸಿದ್ಧ, ಒಟ್ಟಾರೆ ನನಗೆ ಆ ಅನುದಾನವೂ ಬೇಡ. ಕಸದ ಘಟಕವೂ ಬೇಡ ಎಂದಿದ್ದಾರೆ.

ಎಸ್ಮಾ ಕಾಯ್ದೆ ಜಾರಿ ಮಾಡಿದರೂ ನಾನು ಸಿದ್ಧ:

ನಿನ್ನೆ ಅಂದಾಜು ಮಹದೇವಪುರ, ಬ್ಯಾಟರಾಯನಪುರದ ೪೦೦ ಕಸದ ಲಾರಿಗಳನ್ನು ವಾಪಸ್ ಕಳಿಸಿದ್ದೇನೆ. ತಾಲ್ಲೂಕಿಗೆ ಕಸವೂ ಬೇಡ.. ಕಸದ ಅನುದಾನವೂ ಬೇಡ.. ಜನರ ಪರ ನಿಂತು ಹೋರಾಟ ಮಾಡುತ್ತೇನೆ. ನೀವು ಎಸ್ಮಾ ಕಾಯ್ದೆ ಜಾರಿ ಮಾಡಿದರೂ ನಾನು ಸಿದ್ದ. ಏನೇ ಬೆದರಿಕೆ ಹಾಕಿದರೂ ಸಿದ್ದ, ನನ್ನ ಮನೆ ಮೇಲೆ ಕಸ ಸುರಿದರೂ ನಾನು ಸಿದ್ಧನಿದ್ದೇನೆ. ಜನರ ಪರವಾಗಿ ಯಾವುದೇ ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ಕಸದ ಘಟಕದಿಂದಾಗಿ ಈ ಭಾಗದ ಎರಡು ಗ್ರಾಮ ಪಂಚಾಯ್ತಿಗಳ ಪ್ರದೇಶದಲ್ಲಿ ನೆಲ, ಜಲ, ವಾಯು ಸಂಪೂರ್ಣ ಕಲುಷಿತಗೊಂಡಿದೆ. ಈ ಭಾಗದ ಜನರು ಅನೇಕ ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಜಾನುವಾರು ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆಲ್ಲ ಯಾರು ಹೊಣೆ. ಜನರು ಘಟಕವನ್ನು ಸ್ಥಗಿತಗೊಳಿಸಲು ಅಧಿಕಾರ ನೀಡಿದ್ದಾರೆ. ಜನರ ಪರವಾಗಿ ನಿಲ್ಲುತ್ತೇನೆ. ಕಸವನ್ನು ಸುರಿಯುವುದಿದ್ದರೆ ಆರ್. ಆಶೋಕ್, ಬಿ.ವೈ ವಿಜಯೇಂದ್ರ, ಬಿಜೆಪಿ ಕಚೇರಿ ಮುಂದೆ ಏಕೆ ನನ್ನ ಮನೆ ಮುಂದೆಯೇ ಸುರಿಯಲಿ. ಯಾವುದೇ ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ ಹೋರಾಟಕ್ಕೆ ಸಿದ್ದ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದ್ದಾರೆ.

Ramesh Babu

Journalist

Recent Posts

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

1 hour ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

4 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

16 hours ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

19 hours ago

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಆರೋಪ: 112 ತುರ್ತು ಸೇವೆ ಸಿಬ್ಬಂದಿಗೆ ಗಾಯ: ಇಬ್ಬರು ಆರೋಪಿಗಳು ವಶಕ್ಕೆ

ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…

22 hours ago

ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…

1 day ago