2023ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೇಯಲ್ಲಿ 625 ಅಂಕಗಳಿಗೆ 618 ಅಂಕ ಪಡೆದು ಶೇ.98.88 ಫಲಿತಾಂಶದೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗುವ ಮೂಲಕ ತಾಲೂಕು, ಶಾಲೆಗೆ, ಪೋಷಕರಿಗೆ ಕೀರ್ತಿ ತಂದಿರುವ ತಾಲೂಕಿನ ಎಸ್ ಜೆ ಸಿ ಆರ್ ಶಾಲಾ ವಿದ್ಯಾರ್ಥಿನಿ ಎ.ಸ್ಫೂರ್ತಿ.
ಮೇ.8ರಂದು 2023ರ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಫಲಿತಾಂಶದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಎಲ್ಲರ ಅಭಿನಂದನೆಗೆ ಎ.ಸ್ಫೂರ್ತಿ ಪಾತ್ರರಾಗಿದ್ದಾರೆ.
ನನ್ನ ಮಗಳು ಮೊದಲಿನಿಂದಲೂ ಓದಿನಲ್ಲಿ ಮುಂದೆ ಇರುವುದು ಗೊತ್ತಿತ್ತು, ಅದನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಹೆಚ್ಚು ಅಂಕ ಪಡೆಯುವ ಮೂಲಕ ಸಾಬೀತುಪಡಿಸಿದ್ದಾಳೆ. ನನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಇದೆ. ಅವಳು ಎಲ್ಲಿಯವರೆಗೆ ವಿದ್ಯಾಭ್ಯಾಸ ಮುಂದುವರಿಸುತ್ತಾಳೋ ಅಲ್ಲಿಯವರೆಗೆ ಓದಿಸಿ ಒಳ್ಳೆ ಅಧಿಕಾರಿಯನ್ನಾಗಿ ಮಾಡುತ್ತೇನೆ. ಹೆಸರಲ್ಲೇ ಇದೆ ಸ್ಫೂರ್ತಿ, ಇನ್ನೊಬ್ಬರಿಗೆ ಸ್ಫೂರ್ತಿ ಆಗುತ್ತಾಳೆ ಎಂಬ ನಂಬಿಕೆ ಇದೆ ಎಂದು ಟಾಪರ್ ಎ.ಸ್ಫೂರ್ತಿ ತಂದೆ ಆನಂದ್ ಮಗಳ ಸಾಧನೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.
ಮನೆಯಲ್ಲಿ ಸ್ಫೂರ್ತಿಗೆ ತಾಯಿಯೇ ಮೊದಲ ಗುರು. ಎಲ್ಲೂ ಟ್ಯೂಷನ್ ಗೆ ಹೋಗದೆ, ಶಾಲಾ ಶಿಕ್ಷಕರು ಹೇಳಿಕೊಟ್ಟ ಪಾಠ ಹಾಗೂ ಮನೆಯಲ್ಲಿ ಉತ್ತಮ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾಳೆ ಎಂದರು.
ನಂತರ ತಾಯಿ ನಾಗರತ್ನ ಮಾತನಾಡಿ, ನಾನು ನನ್ನ ಮಗಳು ಓದುವ ಶಾಲೆಯಲ್ಲೇ ಸಹಾಯಕಿಯಾಗಿ ಕೆಲಸ ಮಾಡುತ್ತಾನೆ. ನನ್ನ ಮಗಳ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ತಾಲೂಕಿಗೆ ಕೀರ್ತಿ ತಂದಿದ್ದಾಳೆ ಎಂದು ಖುಷಿಪಟ್ಟರು.
ನಂತರ ವಿದ್ಯಾರ್ಥಿನಿ ಎ.ಸ್ಫೂರ್ತಿ ಮಾತನಾಡಿ, ಶಾಲಾ ಶಿಕ್ಷಕರು, ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ನಾನು ಚೆನ್ನಾಗಿ ಓದಿ, ತಂದೆ- ತಾಯಿಗೆ ಒಂದೊಳ್ಳೆ ಗೌರವ ತರಬೇಕು ಎಂದು ಹಠದಿಂದ ಪ್ರತಿ ದಿನ ಅಭ್ಯಾಸ ಮಾಡುತ್ತಿದ್ದೆ. ಅದರ ಪ್ರತಿಫಲ ದಕ್ಕಿದೆ. ಇನ್ನೂ ಅದೇರೀತಿ ಕಠಿಣ ಅಭ್ಯಾಸ ಮಾಡುವ ಮೂಲಕ ಉನ್ನತ ವಿದ್ಯಾಭ್ಯಾ ಮಾಡಿ ಅಧಿಕಾರಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವೆ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕಳ್ಳುತ್ತೇನೆ. ನಮ್ಮ ಪೋಷಕರಿಗೆ ಇಬ್ಬರೂ ಹೆಣ್ಣುಮಕ್ಕಳು, ಗಂಡು ಮಗು ಇಲ್ಲ ಆದ್ದರಿಂದ ಎಲ್ಲಾ ನಾವೆ ಅವರಿಗೆ ಆದ್ದರಿಂದ ಅವರನ್ನು ಖುಷಿಯಿಂದ ಇಡಲು ಪ್ರಯತ್ನಿಸುವೆ. ಮುಂದೆ ಸಿಎ ಮಾಡುವೆ ಎಂದು ತಿಳಿಸಿದರು.
ಮಗಳ ಸಾಧನೆಯಿಂದ ಪೋಷಕರ ಕಣ್ಣಂಚಿನಲ್ಲಿ ಆನಂದಭಾಷ್ಪ ಎದ್ದು ಕಾಣುತ್ತಿತ್ತು.