ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಯಲಹಂಕ ತಾಲೂಕಿನ ಹೊನ್ನೆನಹಳ್ಳಿ ಗೇಟ್ ಬಳಿ ನಡೆದಿದೆ.
ಪ್ರೆಸಿಡೆನ್ಸಿ ವಿವಿಯ ಬಿಬಿಎ ವಿದ್ಯಾರ್ಥಿ ಹಿಂದೂಪುರ ಮೂಲದ ತೇಜಸ್ (20), ಅದ್ದೇ ವಿಶ್ವನಾಥಪುರ ಗ್ರಾಮದ ಪವನ್ (21) ಮೃತ ದುರ್ದೈವಿಗಳು.
ತೇಜಸ್ ಬೆಳಗ್ಗೆ ಕಾಲೇಜಿಗೆ ತೆರಳುತ್ತಿದ್ದ, ಇದೇ ವೇಳೆ ಪವನ್ ಕುಮಾರ್ ಕೆಲಸಕ್ಕೆ ತೆರಳಲು ಗ್ರಾಮದಿಂದ ಬರುತ್ತಿದ್ದ. ಈ ವೇಳೆ ಅಪಘಾತ ಸಂಭವಿಸಿದೆ.
ಆರ್ ಒನ್ 5 ಬೈಕ್ ಮತ್ತು ಹೋಂಡಾ ಸಿಟಿ ಬೈಕ್ ನಡುವೆ ನಡೆದ ಅಪಘಾತ ನಡೆದಿದೆ.
ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.