ಎರಡು ಬೈಕ್ ಗಳ ನಡುವೆ ಅಪಘಾತವಾಗಿದ್ದು, ಬುಲೈಟ್ ಬೈಕ್ ಸವಾರನ ಎರಡೂ ಕಾಲಗಳಿಗೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಇಂದು ಬೆಳಗ್ಗೆ ಯಲಹಂಕ-ಹಿಂದೂಪುರ ಹೆದ್ದಾರಿಯ ದೊಡ್ಡಬಳ್ಳಾಪುರದ ಸಿದ್ದೇನಾಯಕನಹಳ್ಳಿ ಬಳಿ ನಡೆದಿದೆ.
ಬುಲೆಟ್ ಬೈಕ್ ಸವಾರನು ಸಿದ್ದೇನಾಯಕನಹಳ್ಳಿ ನಿವಾಸಿಯಾಗಿದ್ದು, ರಸ್ತೆ ದಾಟಲು ಮುಂದಾಗಿದ್ದ ವೇಳೆ ಯಲಹಂಕ ಕಡೆಯಿಂದ ವೇಗವಾಗಿ ಬಂದ ಕಾವಾಸಾಕಿ ಬೈಕ್ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಬುಲೆಟ್ ಬೈಕ್ ಸುಮಾರು 100ಮೀಟರ್ ದೂರ ಹಾರಿ ಹೋಗಿ ಬಿದ್ದಿದೆ. ಎರಡೂ ಬೈಕ್ ಗಳು ಸಂಪೂರ್ಣ ಜಖಂಗೊಂಡಿವೆ.
ಗಾಂಧಿ ಜಯಂತಿ ರಜೆಯಲ್ಲಿ ಜಾಲಿ ರೈಡ್ ಮಾಡಲೆಂದು ಕಾವಾಸಾಕಿ ಬೈಕ್ ಸವಾರ ವೇಗವಾಗಿ ಯಲಹಂಕ ಕಡೆಯಿಂದ ಬರುತ್ತಿದ್ದ ಎನ್ನಲಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ, ಸಂಚಾರ ದಟ್ಟಣೆ ನಿಯಂತ್ರಣ ಮಾಡಿ, ಅಪಘಾತಗೊಂಡ ಬೈಕ್ ಗಳನ್ನು ತೆರವುಗೊಳಿಸಿದ್ದಾರೆ.