ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ – ತಾಯಿಯ ಕಿಡ್ನಿ ಪ್ರೀತಿಯಿಂದ ಉಳಿಯಿತು ಮಗಳ ಜೀವ
ವೈಟ್ ಫೀಲ್ದ್ ಬೆಂಗಳೂರು – ಬೆಂಗಳೂರು ಮೂಲದ 38 ವರ್ಷದ ಮಹಿಳೆಗೆ ಎರಡನೇ ಬಾರಿಗೆ ಕಿಡ್ನಿಕಸಿ ಶಸ್ತ್ರಚಿಕಿತ್ಸೆ ಮಾಡಿ ಯಶ್ವಸಿಯಾಗಿ ಆಕೆಯನ್ನು ಗುಣಮುಖರನ್ನಾಗಿ ಮಾಡಲಾಗಿದೆ.
ಮಹಿಳೆಯೂ ಧೀರ್ಘಕಾಲದ ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಾ ಇದ್ದ ಕಾರಣ 2016 ರಲ್ಲಿ ಆಕೆಯ ತಂದೆಯೇ ಕಿಡ್ನಿ ದಾನ ಮಾಡುವುದರ ಮೂಲಕ ಮೊದಲ ಬಾರಿಗೆ ಯಶಸ್ವಿ ಕಿಡ್ನಿ ಕಸಿ ಮಾಡಲಾಗಿತ್ತು. ಆದಾದ ಬಳಿಕ ಆಕೆಯಲ್ಲಿ ಕಿಡ್ನಿ ಸಂಭಂಧಿತ ಯಾವುದೇ ಸಮಸ್ಯೆಗಳು ಕಂಡು ಬಂದಿರಲಿಲ್ಲ . ಆದರೆ ಕಳೆದ ನವಂಬರ್ ತಿಂಗಳಿನಿಂದ ಆರೋಗ್ಯದಲ್ಲಿ ಸಾಕಷ್ಟು ಏರು ಪೇರು ಕಂಡು ಬಂತು . ತೂಕ ಇಳಿಕೆ, ಊಟ ಸೇರುತ್ತಾ ಇರಲಿಲ್ಲ ಹಾಗೂ ಮಲಬದ್ದತೆ ಸೇರಿದಂತೆ ಹಲವು ರೋಗ ಲಕ್ಷಣಗಳು ಕಾಣಿಸಲಾರಂಭಿಸಿತು.
ಅಲ್ಲದೇ ರಕ್ತ ಪರೀಕ್ಷೆಯಲ್ಲಿ ಕ್ರಿಯಾಟಿನಿನ್ ಮಟ್ಟ ಏರಿಕೆಯಾಗಿದ್ದರಿಂದ ವಾರಕ್ಕೆ ಎರಡು ಬಾರಿ ಹೆಮೊಡಯಾಲಿಸಿಸ್( 2 ಕಿಡ್ನಿ ಫೇಲ್ ಆದಾಗ ಮಾಡುವ ಚಿಕಿತ್ಸೆ) ಮಾಡಲಾಗುತ್ತಾ ಇತ್ತು.
2025ರ ಫೆಬ್ರವರಿಯ ಬಳಿಕ ರೋಗಿಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್ ಫೀಲ್ಡ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಹಿಳೆಯನ್ನು ದಾಖಲಸಲಾಯಿತು. ಮೂತ್ರಶಾಸ್ತಜ್ಞ ಡಾ. ಪ್ರಮೋದ್ ರವರ ನೇತ್ರತ್ವದಲ್ಲಿ ಎರಡನೇ ಬಾರಿಗೆ ಆಕೆಗೆ ಕಿಡ್ನಿ ಕಸಿ ಮಾಡಲಾಯಿತು. ಈ ಬಾರಿ ಆಕೆಯ ತಾಯಿ ಅವರಿಗೆ ಕಿಡ್ನಿ ದಾನ ಮಾಡಿದ್ದರು. ಸುಮಾರು 3 ಗಂಟೆಗಳ ಕಾಲ ಆಸ್ಪತ್ರೆಯ ನೆಫ್ರೋಲಾಜಿ, ಯೂರೋಲಾಜಿ ಮತ್ತು ಟ್ರಾನ್ಸ್ಪ್ಲಾಂಟ್ ತಜ್ಞರ ತಂಡವು ಉನ್ನತ ತಂತ್ರಜ್ಞಾನ ಬಳಸಿಕೊಂಡು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದರು. ಶಸ್ತ್ರಚಿಕಿತ್ಸೆಯ 7ನೇ ದಿನಕ್ಕೆ ಕ್ರಿಯಾಟಿನಿನ್ , ಹಿಮೋಗ್ಲೋಬಿನ್ , ಬಿಳಿ ರಕ್ತಕಣಗಳು ಸರಿಯಾಗಿ ಕೆಲಸ ಮಾಡಲು ಶುರು ಮಾಡಿದ್ದ ಕಾರಣ ಮಹಿಳೆಯೂ ಸಂಪೂರ್ಣವಾಗಿ ಗುಣಮುಖರಾಗಿದ್ದರು.
ಮರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಎಂದರೆ ಸಾಮಾನ್ಯ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಸವಾಲುಭರಿತ. ಈ ರೋಗಿಯು ಹಿಂದೆ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾಗಿರುವುದರಿಂದ ಶರೀರದ ರಕ್ಷಣಾತ್ಮಕ ವ್ಯವಸ್ಥೆ ಹೆಚ್ಚು ಬಲವಂತವಾಗಿರುತ್ತದೆ. ಆದ್ದರಿಂದ ಔಷಧಿ ನೀಡುವ ಕ್ರಮದಿಂದ ಹಿಡಿದು ಶಸ್ತ್ರಚಿಕಿತ್ಸೆ ತನಕ ಹೆಚ್ಚು ನಿಖರತೆ ಅಗತ್ಯವಿರುತ್ತದೆ ಎಂದು ಶಸ್ತ್ರಚಿಕಿತ್ಸೆಯ ಬಳಿಕ ಡಾ. ಪ್ರಮೋದ್, ಯೂರೋಲೋಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸ ತಜ್ಞ ಸಂತಸ ವ್ಯಕ್ತಪಡಿಸಿದ್ದಾರೆ.
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…
2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…
ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…