ಎರಡು ತಿಂಗಳು ಮೂತ್ರದಲ್ಲಿ ರಕ್ತ – ಜೀವಕ್ಕೆ ಅಪಾಯವಾಗಿದ್ದ ಪ್ರಕರಣದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು, ವೈಟ್‌ ಫೀಲ್ದ್‌ : ಕಳೆದ ಎರಡು ತಿಂಗಳಿನಿಂದ 71 ವರ್ಷದ ಮಹಿಳೆಗೆ ಪ್ರತೀ ಬಾರಿ ಮೂತ್ರ ವಿಸರ್ಜನೆ ಮಾಡುವಾಗ ರಕ್ತ ಬರುತ್ತಿರುವುದನ್ನು ಕಂಡು ಭಯದಲ್ಲಿ ಬದುಕುತ್ತಿದ್ದರು. ಶರೀರ ದುರ್ಬಲವಾಗುತ್ತಿತ್ತು, ರಕ್ತದ ಮಟ್ಟ ಅಪಾಯಕಾರಿಯಾಗಿ ಕುಸಿಯುತ್ತಿತ್ತು. ಆಸ್ಪತ್ರೆಗೆ ಬಂದಾಗ ಅವರ ಹಿಮೋಗ್ಲೋಬಿನ್ ಕೇವಲ 5 ಗ್ರಾಂ/dl ಇತ್ತು. ಕುಟುಂಬದವರು ಬೆಚ್ಚಿಬಿದ್ದರು – “ಇನ್ನೆಷ್ಟು ದಿನ ಬದುಕುತ್ತಾರೆ?” ಎಂಬ ಭಯ ಅವರ ಕಣ್ಣಲ್ಲಿ ಕಾಣಿಸುತ್ತಿತ್ತು.

ಬಳಿಕೆ ಮಡಿಕವರ್‌ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ ದಿಲೀಪ್‌ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಶುರು ಮಾಡಿದರು . ಸಿಟಿ ಸ್ಕ್ಯಾನ್ ಮಾಡಿದಾಗ ಎಡ ಕಿಡ್ನಿಯಲ್ಲಿ 20 ಸೆಂ.ಮೀ ಗಾತ್ರದ ಟ್ಯೂಮರ್‌ ಇರೋದು ಪತ್ತೆಯಾಯಿತು. ವೈದ್ಯರು ಇದನ್ನು ಕಿಡ್ನಿ ಟ್ಯೂಮರ್‌ ಎಂದು ಧೃಢಪಡಿಸಿದರು. ಇಳಿ ವಯಸ್ಸಿನಲ್ಲಿ, ಅವರ ಆರೋಗ್ಯ ಕೂಡ ಅಷ್ಟೊಂದು ಪ್ರಬಲವಾಗಿರಲಿಲ್ಲ. ಅಲ್ಲದೇ ಟ್ಯೂಮರ್ ತೆಗೆದು ಹಾಕದೇ ಇದ್ದಿದ್ದರೆ ಜೀವಕ್ಕೆ ಅಪಾಯವಾಗಿತ್ತು.

ಹಾಗಾಗೀ ಸಾಂಪ್ರಾದಾಯಿಕ ಶಸ್ತ್ರಚಿಕಿತ್ಸೆ ಮಾಡದೇ, ರೋಬೊಟಿಕ್‌ ಮೂಲಕ ಆಪರೇಷನ್‌ ಮಾಡಿ ದೊಡ್ಡ ಗಾತ್ರದ ಟ್ಯೂಮರ್‌ ಅನ್ನು ತೆಗೆದು ಹಾಕಲಾಗಿದೆ. ಸರ್ಜರಿ ಬಳಿಕ ಮಾತನಾಡಿದ ಯೂರೋಲೋಜಿಸ್ಟ್‌ ಡಾ ದಿಲೀಪ್‌ ,
“ಇದು ಅತಿ ಅಪಾಯಕಾರಿ ಪ್ರಕರಣವಾಗಿತ್ತು. ರೋಗಿಯ ವಯಸ್ಸು, ಹೆಚ್ಚು ರಕ್ತಹೀನತೆ ಹಾಗೂ ಭಾರಿ ಗಡ್ಡೆ – ಇವುಗಳೊಂದಿಗೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಮಾಡಿದರೇ ಚೇತರಿಕೆ ಕಷ್ಟವಾಗ್ತಾ ಇತ್ತು . ಆದರೆ ರೋಬೋಟಿಕ್ ತಂತ್ರಜ್ಞಾನ ನಮಗೆ ಭರವಸೆ ನೀಡಿತು. ನಿಖರವಾಗಿ, ಸುರಕ್ಷಿತವಾಗಿ ಟ್ಯೂಮರ್‌ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಯಿತು.”

ಕುಟುಂಬದವರು ಕಣ್ಣೀರಿನಿಂದ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು:
“ನಾವು ಅವರನ್ನ ಕಳೆದುಕೊಳ್ಳುತ್ತೇವೆ ಎಂದುಕೊಂಡಿದ್ದೆವು. ಪ್ರತಿದಿನ ಅವರ ಆರೋಗ್ಯ ಹದಗೆಡುತ್ತಿತ್ತು. ಆದರೆ ಈ ಶಸ್ತ್ರಚಿಕಿತ್ಸೆ ಅವರಿಗೆ ಹೊಸ ಜೀವನ ಕೊಟ್ಟಿದೆ. ವೈದ್ಯರಿಗೆ ಮತ್ತು ಮೆಡಿಕವರ್ ಆಸ್ಪತ್ರೆಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು.”

ಪ್ರಸ್ತುತ ಅವರು ಸ್ಥಿರ ಆರೋಗ್ಯ ಸ್ಥಿತಿಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಹೇಳುವಂತೆ, ರೋಬೋಟಿಕ್ ಶಸ್ತ್ರಚಿಕಿತ್ಸೆ ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ಜೀವ ಉಳಿಸುವ ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ. ಕಡಿಮೆ ರಕ್ತಸ್ರಾವ, ಚಿಕ್ಕ ಕತ್ತರಿಕೆ, ವೇಗವಾದ ಚೇತರಿಕೆ ಮತ್ತು ಉತ್ತಮ ಫಲಿತಾಂಶ – ಇವುಗಳ ಮೂಲಕ ವಯೋವೃದ್ಧರಿಗೆ ಇದು ಅಮೂಲ್ಯವಾದ ವರದಾನ.

Ramesh Babu

Journalist

Recent Posts

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

51 minutes ago

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ…?

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ...? ವಾರ್ಡ್ ನಂ.: 1 ಹೆಸರು: ಶ್ವೇತಾ…

4 hours ago

ಮರ್ಯಾದಾ ಹತ್ಯೆ……..

  ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…

13 hours ago

ಅಪಘಾತದಲ್ಲಿ ಪ್ರಜ್ಞೆ ತಪ್ಪಿಬಿದ್ದ ವ್ಯಕ್ತಿ: ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವಸೂಲಿ: ಆಸ್ಪತ್ರೆಗೆ ದಾಖಲಿಸದೇ ಪರಾರಿಯಾಗಿದ್ದ ಐನಾತಿಗಳ ಬಂಧನ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…

24 hours ago

ಚಿನ್ನಾಭರಣ ಮಳಿಗೆಯಲ್ಲಿ ದರೋಡೆ….3 ಕೋಟಿ ಮೌಲ್ಯದ 140 ಕೆಜಿ ಬೆಳ್ಳಿ ಅಭರಣಗಳ ಕಳವು

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…

1 day ago