
ಎರಡು ಟಿಪ್ಪರ್ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಎರಡೂ ಟಿಪ್ಪರ್ ಲಾರಿಗಳು ಪಲ್ಟಿ ಹೊಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ದೊಡ್ಡರಾಯಪ್ಪನಹಳ್ಳಿ ಬಳಿಯ ಮೆಳೇಕೋಟೆ ಮುಖ್ಯರಸ್ತೆಯಲ್ಲಿ ಇಂದು ರಾತ್ರಿ ಸುಮಾರು 8 ಗಂಟೆಯಲ್ಲಿ ನಡೆದಿದೆ…

ಘಟನೆಯಲ್ಲಿ ಓರ್ವ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ…

ಜಲ್ಲಿ ಕಲ್ಲು ತುಂಬಿದ್ದ ಟಿಪ್ಪರ್ ಹಾಗೂ ಖಾಲಿ ಇದ್ದ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ರಸ್ತೆಗೆ ಅಡ್ಡಲಾಗಿ ಟಿಪ್ಪರ್ ಲಾರಿಗಳು ಮುಗುಚಿ ಬಿದ್ದ ಹಿನ್ನೆಲೆ ಸಂಚಾರ ಅಸ್ತವ್ಯಸ್ತಗೊಂಡಿದೆ…

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…