ಹಣಕಾಸಿನ ವ್ಯವಹಾರಕ್ಕೆ ಎರಡು ಗ್ರಾಮದವರ ನಡುವೆ ಮಾರಾಮಾರಿ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಹರಳೂರು ಗೇಟ್ ಸಮೀಪ ನಡೆದಿದೆ.
ಬಾಲೇಪುರ ಮತ್ತು ಚನ್ನಹಳ್ಳಿ ಗ್ರಾಮದವರ ನಡುವೆ ಕಳೆದ ಅನೇಕ ದಿನಗಳಿಂದ ಹಣಕಾಸಿನ ವ್ಯವಹಾರದ ಬಗ್ಗೆ ವಿವಾದ ನಡೆಯುತ್ತಿತ್ತು.
ಚನ್ನಹಳ್ಳಿ ಗ್ರಾಮದವರ ಮೇಲೆ ದೇವನಹಳ್ಳಿ ಯುವಕ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ನಡೆಸಲು ಕಾರಣ ಬಾಲೇಪುರ ಗ್ರಾಮದವರು ಎನ್ನಲಾಗಿದೆ.
ಘಟನೆಯಲ್ಲಿ ಚನ್ನಹಳ್ಳಿ ಗ್ರಾಮದ ಓರ್ವ ಸ್ಥಿತಿ ಗಂಭೀರವಾಗಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ದೇವನಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.