ಡಿ.4ರಂದು ಸುಮಾರು 4ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ರೈತನ ಎಮ್ಮೆ ಮತ್ತು ಕರುವನ್ನ ರಾತ್ರೋರಾತ್ರಿ ಕದ್ದು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಮೂವರು ಕಳ್ಳರನ್ನು ಬೀದರ್ ನ ಬಗದಲ್ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಎಮ್ಮೆಗಳನ್ನ ಸಾಗಿಸುತ್ತಿದ್ದ ಗೂಡ್ಸ್ ವಾಹನವನ್ನ ಸಹ ಜಪ್ತಿ ಮಾಡಿದ್ದಾರೆ.
ಎಮ್ಮೆಗಳನ್ನು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದುಹೋದ ಎಮ್ಮೆ ಹಾಗೂ ಕರುವನ್ನು ಪತ್ತೆಹಚ್ಚಿಕೊಡುವಂತೆ ರೈತನು ಬಗದಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಪತ್ತೆ ಕುರಿತು ಸಿಪಿಐ ಶ್ರೀನಿವಾಸ ಅಲ್ಲಾಪೂರೆ ಗ್ರಾಮೀಣ ವೃತ್ತ, ಸುವರ್ಣಾ, ಪಿಎಸ್ಐ ಬಗದಲ್ ಪೊಲೀಸ್ ಠಾಣೆ ನೇತ್ರತ್ವದಲ್ಲಿ ಕಳ್ಳತನ ಪತ್ತಗೆ ತಂಡ ರಚನೆಯಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿದ ಪೊಲೀಸರು ಹುಡುಕಾಟ ನಡೆಸಿ ಕೊನೆಗೆ ರೈತನಿಗೆ ಸೇರಿದ ಎಮ್ಮೆ ಹಾಗೂ ಕರುವನ್ನ ಪತ್ತೆ ಹಚ್ಚಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಗದಲ್ ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯಕ್ಕೆ ಎಸ್ಪಿ ಚನ್ನಬಸವಣ್ಣ ಲಂಗೋಟೆ ಅವರು ಶ್ಲಾಘಿಸಿ, ಪ್ರಶಂಸನಾ ಪತ್ರದೊಂದಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.