ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಶನಿವಾರ ಸಂಜೆ ವಿಜಯವಾಡದ ಸಿಂಗ್ ನಗರದಲ್ಲಿರುವ ವಿವೇಕಾನಂದ ಸ್ಕೂಲ್ ಸೆಂಟರ್ನಲ್ಲಿ ‘ಮೇಮಂತ ಸಿದ್ದಂ’ ಬಸ್ ಯಾತ್ರೆಯಲ್ಲಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಕಲ್ಲು ತೂರಾಟ ನಡೆಸಿದಾಗ ಅವರ ಎಡ ಕಣ್ಣಿನ ಹುಬ್ಬಿನ ಮೇಲೆ ಸಣ್ಣ ಗಾಯವಾಗಿದೆ.
ಗಾಯಗೊಂಡ ಸಿಎಂ ಜಗನ್ ಅವರಿಗೆ ಬಸ್ ನಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಪಡೆದ ನಂತರ ರೋಡ್ ಶೋವನ್ನು ಮುಂದುವರಿಸಿದರು.
ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.