ನಗರದ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಕೆನರಾ ಬ್ಯಾಂಕ್ ವತಿಯಿಂದ ಎಪಿಎಂಸಿ ವ್ಯಾಪಾರಸ್ಥರು ಹಾಗೂ ವರ್ತಕರಿಗಾಗಿ ಹಣಕಾಸು ಅರಿವು ಶಿಬಿರ ನಡೆಯಿತು.
ಬ್ಯಾಂಕುಗಳಿಂದ ಸಿಗುವ ಸೌಲಭ್ಯ, ಎಂಎಸ್ಎಂಇ, ಮುದ್ರಾ ಸಾಲ ಯೋಜನೆ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಅರಿವು ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಯಿತು.
ಬ್ಯಾಂಕ್ ಗಳಲ್ಲಿ ಹೇಗೆ ಹಣಕಾಸು ವ್ಯವಹಾರ ನಡೆಸುವುದು, ಬ್ಯಾಂಕ್ ಹೇಗೆ ಸಹಾಯ ಅಥವಾ ಉಪಯೋಗ ಆಗುತ್ತದೆ, ಟ್ಯಾಕ್ಸ್, ಸಾಲದ ಕುರಿತು ಜಾಗೃತಿ ಮೂಡಿಸಲಾಯಿತು.
ಕೆಲ ವರ್ತಕರು ಬ್ಯಾಂಕ್ ಸಾಲಸೌಲಭ್ಯ ಪಡೆಯಲು ಇರುವ ಅಡೆತಡೆಗಳು, ಪರಿಹಾರೋಪಾಯಗಳ ಕುರಿತು ಮಾಹಿತಿ ಪಡೆದರು.
ಲೀಡ್ಬ್ಯಾಂಕ್ ವ್ಯವಸ್ಥಾಪಕ ಮಧುಕರ್, ಪಾಲನಜೋಗಿಹಳ್ಳಿ ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಅಮೃತ, ದೇವನಹಳ್ಳಿ ಆರ್. ಒ. ಬಸಪ್ಪ ಸೇರಿದಂತೆ ಕೆನರಾ ಬ್ಯಾಂಕ್ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.