ಕೋಲಾರ: ತಾಲೂಕಿನ ಗಾಜಲದಿನ್ನೆಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಮೇ 5 ರಿಂದ 15 ರವರೆಗೆ ಹತ್ತು ದಿನಗಳ ಕಾಲ ನಡೆಯುತ್ತೀರುವ ಎನ್.ಸಿ.ಸಿ ವಿಧ್ಯಾರ್ಥಿಗಳ ತರಬೇತಿ ಶಿಬಿರದ ವೀಕ್ಷಣೆಗೆ ಶನಿವಾರ ಸಂಸ್ಥೆಯ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ಕಮಾಂಡರ್ ವಿ.ಎಸ್ ಅರುಣ್ ಕುಮಾರ್ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಕೋಲಾರ ಜಿಲ್ಲೆಯಾದ್ಯಂತ ವಿವಿಧ ಶಾಲಾ ಕಾಲೇಜುಗಳಿಂದ ಸುಮಾರು 547 ವಿಧ್ಯಾರ್ಥಿಗಳು ಹಾಗೂ 20 ಅಧಿಕಾರಿಗಳು ಸೇರಿದಂತೆ 6 ಜನ ಸಿಬ್ಬಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ ಈ ಸಂದರ್ಭದಲ್ಲಿ ಕರ್ನಲ್ ವಿವೇಕ್ ಶುಕ್ಲಾ, ಅರವಿಂದ ಮಿಶ್ರಾ, ಜಿಲ್ಲಾ ಉಸ್ತುವಾರಿ ಪ್ರಭು ಕುಮಾರ್, ಕ್ಯಾಪ್ಟನ್ ಬಾಲಾಜಿ, ಹರ್ಷಿತ್ ಗಾಂಧಿ ಮುಂತಾದವರು ಭಾಗವಹಿಸಿದ್ದರು