ಎತ್ತಿನಹೊಳೆ ಯೋಜನೆ ಬಗ್ಗೆ ಫೈಲ್ ಮಾಡಲಾಗಿತ್ತು. ಅದಕ್ಕೆ ಎಲ್ಲವನ್ನು ಕೂಡಲೇ ಬಗೆಹರಿಸಲಾಗುವುದು ಎಂದು ಉತ್ತರ ಸಿಕ್ಕಿದೆ. ಎಲ್ಲೇ ಏನೇ ಕೆಲಸ, ಕಾಮಗಾರಿಗಳು ನಡೆಯಬೇಕಾದರೆ ಅಡ್ಡಿ, ವಿರೋಧಗಳು ವ್ಯಕ್ತವಾಗುತ್ತವೆ. ನೀರು ಬೇಕಲ್ವಾ… ಎಲ್ಲೋ ಒಂದು ಕಡೆ ನೀರನ್ನು ಶೇಖರಿಸಬೇಕಲ್ವಾ… ಎಲ್ಲಿ ಶೇಖರಿಸಬೇಕು ಅಂದಾಗ ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣಕ್ಕೆ ಸುಮಾರು 15 ವರ್ಷಗಳಿಂದೆಯೇ ಜಾಗ ಗುರುತಾಗಿತ್ತು. ನೀರು ಎಲ್ಲಿ ಹೇಗೆ ಹರಿಯುತ್ತದೆ ಎಂದು ಹೇಳೋದಕ್ಕೆ ಆಗಲ್ಲ. ಆದ್ದರಿಂದ ಕೇವಲ ಲಕ್ಕೇನಹಳ್ಳಿ ಮಾತ್ರವಲ್ಲದೇ ಕೊರಟಗೆರೆಯ ಕೆಲವು ಭಾಗಗಳನ್ನು ನೀರು ಶೇಖರಣೆಗೆ ತೆಗೆದುಕೊಳ್ಳಲಾಗಿದೆ. ಅದನ್ನು ನಾನು ಕ್ಯಾಬೆನೆಟ್ ಗೆ ವರ್ಗಾಯಿಸುತ್ತೇನೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ ಅವರು, ನಾನು ಒಬ್ಬ ಪಕ್ಷದ ಅಧ್ಯಕ್ಷನಿದ್ದೇನೆ.. ಪಾರ್ಟಿಯವರು ಏನು ಹೇಳಿದ್ದಾರೆ ಎಂದು ಸಿಎಂ ಉಲ್ಲೇಖ ಮಾಡಿದ್ದಾರೆ. ನಿಮ್ಮ ಪ್ರಶಗನೆಗಳಿಗೆಲ್ಲಾ ಅವರೇ ಉತ್ತರ ಕೊಟ್ಟಿದ್ದಾರೆ. ಅವರೇ ಪ್ರಶ್ನೆ ಹಾಕ್ತಾರೆ… ಅವರೇ ಉತ್ತರ ಹೇಳ್ತಾರೆ. ಅವರು ಉತ್ತರ ಕೊಟ್ಟಮೇಲೆ ಪದೇ ಪದೇ ನಾವು ಮಾತನಾಡೋದು ಸೂಕ್ತವಲ್ಲ. ನಾನು ಈವಿಚಾರವಾಗಿ ಕಾಮೆಂಟ್ ಮಾಡಲು ಹೋಗಲ್ಲ. ಕಾಮೆಂಟ್ ಮಾಡುವ ಅವಶ್ಯಕತೆಯೂ ಇಲ್ಲ. ಸದ್ಯಕ್ಕೆ ನಾನು ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ ಎಂದು ಹೇಳಿದರು.