ಎಟಿಎಂ ದರೋಡೆಗೆ ಖದೀಮರು ಹಾಕಿದ್ದ ಭರ್ಜರಿ ಪ್ಲ್ಯಾನ್ ವಿಫಲವಾಗಿದೆ. ಈ ಘಟನೆ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.
ಕೆನರಾ ಬ್ಯಾಂಕ್ ನ ಎಟಿಎಂ ದರೋಡೆಗೆ ಕಳ್ಳರು ಯತ್ನ ನಡೆಸಿದ್ದಾರೆ. ಕಳ್ಳರು ಕಳ್ಳತನಕ್ಕೆ ಬಂದಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಎಟಿಎಂ ಒಳಗಡೆ ಬಂದು ಎಟಿಎಂ ಯಂತ್ರ ಹೊಡೆಯಲು ಕಳ್ಳರು ಮುಂದಾಗಿದ್ದಾನೆ. ಯಂತ್ರ ಓಪನ್ ಆಗುತ್ತಿದ್ದಂತೆ ಸೈರನ್ ಸದ್ದು ಮೊಳಗಿದೆ. ಸೈರನ್ ಕೂಗುತ್ತಿದ್ದಂತೆ ಎಟಿಎಂ ನಿಂದ ಕಳ್ಳರು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.