ಎಟಿಎಂ ಕೇಂದ್ರಗಳಲ್ಲಿ ಜನರಿಗೆ ಸಹಕಾರ ನೀಡುವ ನೆಪ ಹೇಳಿ ವಂಚನೆ: ಎಟಿಎಂ‌ ಕಾರ್ಡ್ ಬಳಸಿ 2,26,000 ಹಣವನ್ನ ವಿತ್ ಡ್ರಾ‌ : ಅಂತಾರಾಜ್ಯ ಇಬ್ಬರು ಆರೋಪಿಗಳ ಬಂಧನ: 217‌ಎಟಿಎಂ ಕಾರ್ಡ್ ಗಳನ್ನ ವಶಕ್ಕೆ ಪಡೆದ ಪೊಲೀಸರು

ಬೈಂದೂರು ಠಾಣಾ ವ್ಯಾಪ್ತಿಯ ಎಟಿಎಂ ಕೇಂದ್ರಗಳಲ್ಲಿ ಜನರಿಗೆ ಸಹಕಾರ ನೀಡುವ ನೆಪ ಹೇಳಿ ವಂಚಿಸಿ ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡುತ್ತಿದ್ದ ಅಂತಾರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಬೈಂದೂರು ಠಾಣೆ ಪಿಎಸ್ಐ ಹಾಗೂ ತಂಡ ಯಶಸ್ವಿಯಾಗಿದ್ದಾರೆ.

ಜ.10 ರಂದು ಕುಂದಾಪುರದಲ್ಲಿ ಹರಿಯಾಣ ರಾಜ್ಯದ ಬರ್ಸಿ ಜಟಾನ್ ಮೂಲದ ಸಂದೀಪ(36), ಹಾಗೂ ಔರಂಗನಗರ ಮೂಲದ ರವಿ(27), ಎಂಬ ಆರೋಪಿಗಳನ್ನ ಬಂಧಿಸಿ, ಬಂಧಿತರಿಂದ 21 ಸಾವಿರ ಹಣ, 217‌ಎಟಿಎಂ ಕಾರ್ಡ್ ಗಳನ್ನ ವಶಕ್ಕೆ ಪಡೆಯಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರೂರು ಗ್ರಾಮದ ಶಿರೂರು ಅರ್ಬನ್ ಬ್ಯಾಂಕಿನ ಎಟಿಎಂ, ಶಿರೂರು ಕೆನರಾ ಬ್ಯಾಂಕ್ ಎಟಿಎಂ ಹಾಗೂ ಬೈಂದೂರು ಎಸ್ ಬಿಐ‌ ಬ್ಯಾಂಕ್ ಎಟಿಎಂ ನಲ್ಲಿ ಗ್ರಾಹಕರ ಸೋಗಿನಲ್ಲಿ ಎಟಿಎಂ ಒಳಗಡೆ ಹೋಗಿ ಜನರಿಗೆ ಸಹಕರಿಸುವಂತೆ ನಟಿಸಿ, ಮೋಸ ಮಾಡಿ ಎಟಿಎಂ ಕಾರ್ಡ್ ತೆಗೆದುಕೊಂಡು ಮತ್ತೆ ಅದನ್ನ ಅದಲುಬದಲು ಮಾಡಿ, ಜನರಿಂದ ಪಡೆದಿದ್ದ ಎಟಿಎಂ‌ ಕಾರ್ಡ್ ಬಳಸಿ 2,26,000 ಹಣವನ್ನ ವಿತ್ ಡ್ರಾ‌ ಮಾಡಿಕೊಂಡು ಹೋಗಿರುತ್ತಾರೆ.

ಈ  ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದು, ಪ್ರಕರಣದಲ್ಲಿ ಆರೋಪಿಗಳ ಪತ್ತೆ ಮಾಡಲು ವಿಶೇಷ ತಂಡವನ್ನು ರಚನೆ ಆರೋಪಿಗಳನ್ನ ಬಂಧನ ಮಾಡಲಾಗಿದೆ. ಈ ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ 20ಕ್ಕೂ  ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *