ಫೆ.28 ರಂದು ರಾತ್ರಿ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಿಬೆಲೆ ಟೌನಿನ ಎಸ್‌ಬಿಐ ಬ್ಯಾಂಕಿನ ATM ನ್ನು ಗ್ಯಾಸ್ ಕಟರ್ ನಿಂದ ಕಟ್ ಮಾಡಿ ATMನಲ್ಲಿದ್ದ ಸುಮಾರು 30 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿದೆ.
ಈ ಹಿನ್ನೆಲೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಕೆ.ಬಾಬಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಂಧ್ರ ನೊಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿರುವ ಖದೀಮರು, ಗುರುತು ಸಿಗಬಾರದೆಂದು ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದಿದ್ದಾರೆ. ಕಳವು ಮಾಡಿದ ನಂತರ ಹೊಸಕೋಟೆ ಮಾರ್ಗವಾಗಿ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.