ಬೆಂಗಳೂರು: ಎಚ್‌ಸಿಎಲ್ ಟೆಕ್ ಕಂಪನಿಯೂ ದ್ವಿತೀಯ ಪಿಯುಸಿ ಮುಗಿಸಿದ ಅಥವಾ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ನೀಡಲು “ಟೆಕ್‌ಬೀ” ಕಾರ್ಯಕ್ರಮದ ಅಡಿಯಲ್ಲಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
2017 ರಿಂದಲೂ, ಟೆಕ್‌ಬೀ ಕಾರ್ಯಕ್ರಮದ ಅಡಿಯಲ್ಲಿ ಎಚ್‌ಸಿಎಲ್ ಟೆಕ್ ಕಂಪನಿಯು ಸಾವಿರಾರು ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿ ನೀಡಿ, ಅರ್ಹರಿಗೆ ಉದ್ಯೋಗವಾಶವನ್ನೂ ನೀಡಿದೆ. ಇದೀಗ ಈ ವರ್ಷದ ತರಬೇತಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಈ ವರ್ಷ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದೇಶದ ಎಲ್ಲಾ ರಾಜ್ಯಗಳಲ್ಲೂ ಎಚ್‌ಸಿಎಲ್ ಟೆಕ್ ಕಂಪನಿಯು ತರಬೇತಿ ನೀಡಲಿದೆ. ತರಬೇತಿ ಪಡೆಯುವ ವೇಳೆ ಅವರಿಗೆ ಉದ್ಯೋಗ ಕೌಶಲ್ಯಗಳನ್ನು ಒದಗಿಸಿ, ಪ್ರಮುಖ ಜಾಗತಿಕ ಕಂಪನಿಗಳಿಗೆ ಪ್ರಾಜೆಕ್ಟ್‌ಗಳನ್ನು ಮಾಡುವ ಅವಕಾಶಗಳನ್ನೂ ಸಹ ಅರ್ಹ ಅಭ್ಯ್ರಥಿಗಳಿಗೆ ನೀಡಲಾಗುತ್ತದೆ.
ಇದಷ್ಟೇ ಅಲ್ಲದೆ, ಬಿಐಟಿಎಸ್ ಪಿಲಾನಿ, ಐಐಟಿ ಕೊಟ್ಟಾಯಮ್, ಶಾಸ್ತ್ರ ಯುನಿವರ್ಸಿಟಿ ಮತ್ತು ಅಮಿಟಿ ಯುನಿವರ್ಸಿಟಿ ಆನ್‌ಲೈನ್‌ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಅರೆಕಾಲಿಕವಾಗಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ನೀಡಲಾಗುತ್ತದೆ. ಜೊತೆಗೆ, ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (NSDC) ಮತ್ತು ವಿವಿಧ ರಾಜ್ಯ ಕೌಶಲ ಅಭಿವೃದ್ಧಿ ಕಾರ್ಪೊರೇಶನ್‌ಗಳ ಜೊತೆಗೆ HCLTech ಪಾಲುದಾರಿಕೆ ಹೊಂದಿದ್ದು, ಅವಕಾಶವಂಚಿತ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡಲು ಸಹಕಾರ ನೀಡಲಿದೆ. ಅರ್ಜಿ ಸಲ್ಲಿಸಲು ಆಸಕ್ತರು www.hcltechbee.com ವೆಬ್‌ಸೈಟ್‌ಗೆ ಭೇಟಿ ನೀಡಿ.