ಕನ್ನಡ ವಿಭಾಗದ ವತಿಯಿಂದ ನಗರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ರಾಗಿ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಬಗೆಯ ರಾಗಿ ತಿಂಡಿ ತಿನಿಸುಗಳನ್ನು ಪ್ರದರ್ಶನ ಮಾಡುವ ಮೂಲಕ ಹಳ್ಳಿಯ ಸೊಗಡಿನಲ್ಲಿ ನೆಲೆ ಮೂಡಿದ ಬಡವರ ಪಾಲಿನ ಅನ್ನಪೂರ್ಣೆ ಮತ್ತು ಸಿರಿವಂತರ ಆರೋಗ್ಯದಾತೆಯಾದಂತಹ ರಾಗಿಯ ಮಹತ್ವವನ್ನು ಸಾರಿದರು.
ರಾಗಿ ಪೌಷ್ಟಿಕ ಆಹಾರದಲ್ಲಿ ಒಂದು, ರಾಗಿಯು ನಮ್ಮ ಸಾಂಪ್ರದಾಯಿಕ ಆಹಾರವಾಗಿದೆ. ರಾಗಿ ಧಾನ್ಯದಲ್ಲಿ ಪೋಷಕಾಂಶ, ರೋಗನಿರೋಧಕ ಶಕ್ತಿ, ಫೈಬರ್, ಪ್ರೋಟಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ, ನಾರಿನಂಶ ಅಂಶಗಳು ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನೀಸಿಯಂ, ಬಿ ಜೀವಸತ್ವಗಳಿದ್ದು, ರಕ್ತಹೀನತೆ ಸಮಸ್ಯೆ ಹೋಗಲಾಡಿಸಲು ಉಪಯುಕ್ತವಾಗಿದೆ.
ಈ ಹಿನ್ನೆಲೆ ರಾಗಿ ಮಹತ್ವ ಸಾರಲು ಕನ್ನಡ ವಿಭಾಗದ ವತಿಯಿಂದ ನಗರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ರಾಗಿ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪ್ರಾಂಶುಪಾಲರಾದ ವೆಂಕಟರಾಜು, ಉಪಪ್ರಾಂಶುಪಾಲರಾದ ರಮೇಶ್ ರೆಡ್ಡಿ, ಉಪನ್ಯಾಸಕರಾದ ರಾಧಾಮಣಿ, ಪವಿತ್ರ, ಅಶ್ವಿನಿ, ಶಶಿ, ದೇವರಾಜ್ ಉಪಸ್ಥಿತರಿದ್ದರು