ಎಂ.ಫಿಲ್ (ಮಾಸ್ಟರ್ ಆಫ್ ಫಿಲಾಸಫಿ) ಮಾನ್ಯತೆ ಪಡೆದ ಪದವಿಯಲ್ಲ, ಇಂತಹ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಡಿ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಥಿಗಳಿಗೆ ಸೂಚಿಸಿದೆ. ಎಂ.ಫಿಲ್ ಕೋರ್ಸ್ ಅನ್ನು ನವೆಂಬರ್ 2022ರಲ್ಲಿಯೇ ಯುಜಿಸಿ ಕೈಬಿಟ್ಟಿದೆ ಎಂದು ಹೇಳಿದೆ.
ಕೆಲವು ವಿಶ್ವವಿದ್ಯಾಲಯಗಳು ಎಂಫಿಲ್ ಕೋರ್ಸ್‌ಗಳನ್ನು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ಎಂಫಿಲ್ ಕೋರ್ಸ್‌ಗಳನ್ನು ನಿಲ್ಲಿಸುವಂತೆ ಯುಜಿಸಿ ಆದೇಶ ಹೊರಡಿಸಿರುವುದನ್ನು ನೆನಪಿಸಿದೆ.