ಉತ್ತಮ ಜೀವನ ನಡೆಸಲು ಕೌಶಲ್ಯ ಪ್ರಮುಖ ಪಾತ್ರವಹಿಸುತ್ತದೆ: ಜಿಲ್ಲಾ ಕೌಶಲ್ಯಾಧಿಕಾರಿ ಸಿ.ಜಗನ್ನಾಥ

ಜಾಗತೀಕರಣದ ನಂತರ ದೇಶದಲ್ಲಿ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತಿರುವುದರಿಂದ ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ನಮ್ಮಲ್ಲಿರುವ ಮಾನವ ಸಂಪನ್ಮೂಲವನ್ನು ಕೌಶಲ್ಯ ಭರಿತವಾಗಿಸಬೇಕು. ಭಾರತ ದೇಶದಲ್ಲಿ ಯುವ ಶಕ್ತಿಯ ಸಂಖ್ಯೆ ಅಧಿಕವಾಗಿದೆ. ಗ್ರಾಮಾಂತರ ಜಿಲ್ಲೆಗೆ ಹೆಚ್ಚೆಚ್ಚು ವಿದೇಶಿ ಕಂಪನಿಗಳು ಕಾಲಿಡುತ್ತಿವೆ, ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ಒಳ್ಳೆಯ ಜೀವನೋಪಾಯಕ್ಕೆ ಕೌಶಲ್ಯ ಅತಿ ಮುಖ್ಯ ಎಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಉಪ‌ ನಿರ್ದೇಶಕರಾದ ಸಿ.ಜಗನ್ನಾಥ ಹೇಳಿದರು.

ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವಪೀಳಿಗೆಗೆ ಆತ್ಮವಿಶ್ವಾಸ ಇರಬೇಕು. ಸಿಗುವ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಂವಹನ ನಡೆಸಲು ಕೌಶಲ್ಯ ಬೇಕು ಎಂದು ಹೇಳಿದರು.

ಪ್ರಪಂಚದ ಜೊತೆಗೆ ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಆಗುಹೋಗುಗಳನ್ನು ತಿಳಿದುಕೊಂಡಿರಬೇಕು. ಸ್ಪರ್ಧೆಯನ್ನು ಎದುರಿಸಲು ಕೌಶಲ್ಯವನ್ನು ತಳಪಾಯದಿಂದ ಅರಿತುಕೊಳ್ಳಬೇಕು. ಕೌಶಲ್ಯದಿಂದ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವನ್ನು ಕಾಣಬಹುದು ಎಂದು ಪ್ರಾಂಶುಪಾಲರಾದ ಡಾ. ಸದಾಶಿವರಾಮಚಂದ್ರ ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳು ಹಾಗೂ ಕೌಶಲ್ಯ ತರಬೇತಿ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *