ಈಜುಕೊಳದಲ್ಲಿ ಬಿದ್ದು 10 ವರ್ಷದ ಬಾಲಕನೋರ್ವ ಸಾವನಪ್ಪಿರುವ ಘಟನೆ ತಾಲೂಕಿನ ತಿಪ್ಪೂರು ಮತ್ತು ಬೊಮ್ಮನಹಳ್ಳಿ ಮಾರ್ಗಮಧ್ಯೆ ಇರುವ ಖಾಸಗಿ ಫಾರಂ ಹೌಸ್ ನಲ್ಲಿ ನಡೆದಿದೆ.
ಮೃತ ಬಾಲಕನನ್ನು ವಿಶ್ವನಾಥ್ (10ವರ್ಷ) ಎಂದು ಗುರುತಿಸಲಾಗಿದ್ದು, ಅದೇ ಫಾರಂ ಹೌಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಜಾಪುರ ಮೂಲದ ಯಮನಪ್ಪ ಪೂಜಾರಿ ಎಂಬುವವರ ಮಗ ಎಂದು ಗುರುತಿಸಲಾಗಿದೆ.
ಈಜು ಕೊಳದಲ್ಲಿ ನೀರು ತುಂಬಿ ಮೇಲೆ ನೀಲಿ ಬಣ್ಣದ ಟಾರ್ಪಲ್ ಅನ್ನು ಹೊದಿಸಲಾಗಿದ್ದು, ಬಾಲಕ ವಿಶ್ವನಾಥ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.