‘ಈಗಿನ ರಾಜಕೀಯ ಚಿತ್ರಣ ವ್ಯಾಪಾರದ ಸರಕಾಗಿದೆ’-ಕೆ.ವೆಂಕಟೇಶ್

ಈಗಿನ ರಾಜಕೀಯ ಚಿತ್ರಣ ವ್ಯಾಪಾರದ ಸರಕಾಗಿದೆ ಎಂದು ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಕೆ.ವೆಂಕಟೇಶ್ ಅವರು ಹೇಳಿದರು.

ನಗರದ ಕನ್ನಡ ಜಾಗೃತ ಪರಿಷತ್ತಿನಲ್ಲಿ ಎಂ.ಎಸ್.ಸಂಪತ್ ಅಯ್ಯಂಗಾರ್ ಒಡನಾಡಿ ಬಳಗದ ವತಿಯಿಂದ ಹಿರಿಯ ಪತ್ರಕರ್ತ ಸಂಪತ್ ಅಯ್ಯಂಗಾರ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಎಂಬುದು ಇಂದು ಅಂಗಡಿಯಲ್ಲಿ ವ್ಯಾಪಾರ ಮಾಡುವ ಸರಕಾಗಿದೆ.

ಮತದಾನ ಎಂಬುದು ಹಣಕೊಟ್ಟು ಕೊಂಡುಕೊಳ್ಳುವ ವಸ್ತುವಾಗಿರುವುದು ಪ್ರಜಾಪ್ರಭುತ್ವದ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಪತ್ ಅಯ್ಯಂಗಾರ್ ಅವರು ಐದು ಬಾರಿ ಪುರಸಭೆಯ ಸದಸ್ಯರು ಮತ್ತು ಒಂದು ಬಾರಿ ನಗರಸಭೆ ಉಪಾಧ್ಯಕ್ಷರಾಗಿದ್ದವರು, ಎಂದೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದವರಲ್ಲ, ಜನಪರವಾಗಿದ್ದ ಅವರು ನೂರಾರು ಶವಗಳ ಸಂಸ್ಕಾರ ಮಾಡಿದ್ದರು, ದೀನ ದಲಿತರ ಪರ ನಿರಂತರ ಕಾಳಜಿ ಇದ್ದ ಅವರು ಹಲವಾರು ದಲಿತ ಯುವಕರ ಬೌದ್ಧಿಕ ಮತ್ತು ಆರ್ಥಿಕವಾಗಿ ಬೆಳೆಸಿದ್ದರು ಎಂದರು.

ಎಂ.ಎಸ್.ಸಂಪತ್ ಅಯ್ಯಂಗಾರ್ ಇನ್ನಿಲ್ಲ ಎಂದಾಗ ನಮ್ಮೊಳಗಿನ ಚೈತನ್ಯ, ಬೆಳಕು ಉತ್ಸಾಹ ಕುಂದಿತು ಎಂದು ಹೇಳುವವರಿಗೆ ಲೆಕ್ಕವಿಲ್ಲ. ಜನರಿಗೆ ಗುರು, ಗೆಳೆಯ, ಮಾರ್ಗದರ್ಶಿಯಂತಿದ್ದ ಅವರು ಒಡನಾಡಿಗಳ ಪಾಲಿಗೆ ಅಕ್ಷಯ ನಿಧಿಯಂತಿದ್ದರು, ಸಮಾಜ ಕಾಯಕ, ಸಂಗೀತ, ಸಾಹಿತ್ಯ, ಪತ್ರಿಕೋದ್ಯಮ, ಅನುವಾದ, ಬೋಧನೆಯನ್ನು ಅವರು ಶ್ರದ್ಧೆ ಇರುವವರಿಗೆಲ್ಲಾ ಧಾರೆ ಎರೆದವರು ಎಂದರು.

ನಿವೃತ್ತ ಪ್ರಾಧ್ಯಾಪಕ ಎಸ್.ನಾರಾಯಣ್ ಅವರು ಮಾತನಾಡಿ ಸಂಪತ್ ಅಯ್ಯಂಗಾರ್ ಅವರು ಆತ್ಮವಿಶ್ವಾಸದ ಪ್ರತೀಕದಂತಿದ್ದರು, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಒಂದು ವರ್ಷಗಳ ಕಾಲ ಯಾವುದೇ ಸಂಭಾವನೆ ಪಡೆಯದೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು.

ಬಹುಮುಖ ಪ್ರತಿಭೆಯ ಸಂಪತ್ ಅಯ್ಯಂಗಾರ್ ಅವರು ಸಂಗೀತ ಪ್ರೇಮಿಯಾಗಿದ್ದರು, ದೊಡ್ಡಬಳ್ಳಾಪುರದಲ್ಲಿ ಸಂಗೀತ ಅಭಿಮಾನಿಗಳ ಒಗ್ಗೂಡಿಸಿ ಸುಸ್ವರ ಎಂಬ ತಂಡವನ್ನು ಕಟ್ಟಿ ರಾಷ್ಟ್ರೀಯ ಮಟ್ಟದ ಸಂಗೀತ ವಿದೂಷಿಗಳನ್ನು ಕರೆಸಿ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದರು.

ಸಂಗೀತದ ಬರಹ ಸೇರಿದಂತೆ ಹಲವಾರು ವಿಚಾರಗಳ ಮೇಲೆ ಪಾಂಡಿತ್ಯ ಹೊಂದಿದ್ದ ಅವರ ಕೆಲವು ಪುಸ್ತಕಗಳು ಆಂಗ್ಲ ಭಾಷೆಗೆ ಅನುವಾದಗೊಂಡಿದ್ದು, ದೊಡ್ಡಬಳ್ಳಾಪುರದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದವರು ಎಂದರು.

ಈ ವೇಳೆ ನಿವೃತ್ತ ಪ್ರಾಧ್ಯಾಪಕ ಎ.ಓ.ಆವಲಮೂರ್ತಿ, ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ, ತ.ನ.ಪ್ರಭುದೇವ್, ವಕೀಲರಾದ ಆರೂಡಿ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

1 hour ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

1 hour ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

2 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

9 hours ago

ಲಾರಿ-ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…

10 hours ago

ಹಸಿವಿನ ಔಷಧಿ ಮತ್ತು ಮತದಾನ…..

ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…

13 hours ago