ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಮೂರನೇ ಮಹಾ ಯುದ್ಧದ ಆತಂಕಕ್ಕೆ ತಂದು ನಿಲ್ಲಿಸಿದೆ. ನಿನ್ನೆ ಇಸ್ರೇಲ್ ಮೇಲೆ ಸುಮಾರು 100 ಕ್ಷಿಪಣಿಗಳಿಂದ ಇರಾನ್ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಖಚಿತಪಡಿಸಿದೆ.
ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಾಯಕನನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು, ಶತ್ರುಗಳ ಗುಂಪಿನ ನಾಯಕನನ್ನು ಕೊಂದು ಹಾಕಿತ್ತು. ಇದೀಗ ಲೆಬನಾನ್ ಮೇಲಿನ ದಾಳಿಯಿಂದ ಕೆರಳಿರುವ ಇರಾನ್ ಸುಮಾರು 100 ಕ್ಷಿಪಣಿಗಳಿಂದ ಇಸ್ರೇಲ್ ಮೇಲೆ ದಾಳಿ ನಡೆಸಿದೆ.