ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಆರು ಸಿಕ್ಸರ್ ಹಾಗೂ ಹನ್ನೊಂದು ಬೌಂಡರಿಗಳ ಮೂಲಕ ಆಕರ್ಷಕ ಶತಕ ಹಾಗೂ ಟ್ರಾವಿಸ್ ಹೆಡ್ ಅವರ ಅರ್ಧಶತಕ ನೆರವಿನಿಂದ ಸನ್ ರೈಸರ್ 44 ರನ್ ಗಳ ಗೆಲುವಿನ ಕೇಕೆ ಹಾಕಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರಾಜಸ್ಥಾನ ತಂಡದ ನಾಯಕ ರಿಯಾನ್ ಪರಾಗ್ ಆಯ್ಕೆ ಸರಿಯಾಗಿರಲಿಲ್ಲ, ಸನ್ ರೈಸರ್ ತಂಡದ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ (24) ಹಾಗೂ ಹೆಡ್ (67) ರನ್ ಪೇರಿಸಿ ಉತ್ತಮ ಆರಂಭ ನೀಡಿದರು.
ನಂತರ ಬಂದ ಇಶಾನ್ ಕ್ರೀಡಾಂಗಣದ ಮೂಲೆ ಮೂಲೆಗಳಿಗೆ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಟೂರ್ನಿಯ ಮೊದಲ ಶತಕ ದಾಖಲಿಸಿದರು, ನಂತರ ಬಂದ ನಿತೀಶ್ ಕುಮಾರ್ ರೆಡ್ಡಿ (30) ಹಾಗೂ ಕ್ಲಾಸೆನ್ (34) ರನ್ ಪೇರಿಸಿ ತಂಡದ ಮೊತ್ತವನ್ನು 286 ರನ್ ಪೇರಿಸಿದರು.
ಬೃಹತ್ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ (1) ಹಾಗೂ ನಾಯಕ ರಿಯಾನ್ ಪರಾಗ್ (4) ಮತ್ತು ನಿತೀಶ್ ರಾಣ(11) ರನ್ ಪೇರಿಸಿ ಔಟಾದರು.
ಈ ಸಂದರ್ಭದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್ (66) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜುರೇಲ್ (76) ಹೆಟ್ಮೆಯರ್ (42)ರನ್ ಗಳಿಸಿ ತಂಡವನ್ನು 242 ರನ್ ಪೇರಿಸಿದರೂ ಸಹ 44 ರನ್ ಸೋಲಿನ್ನು ಅನುಭವಿಸಿದರು.
ನಾಲ್ಕು ಓವರ್ ಗಳಲ್ಲಿ 76 ರನ್ ನೀಡಿ ಚೋಪ್ರಾ ಆಚ೯ರ್ ಅತ್ಯಂತ ದುಬಾರಿ ರನ್ ನೀಡಿ ಕಳಪೆ ದಾಖಲೆ ಅನುಭವಿಸಿದರೆ, ಶತಕ ದಾಖಲಿಸಿದ ಇಶಾನ್ ಕಿಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.