
ಲಾಂಗ್ ಹಿಡಿದು ಪುಂಡರಿಂದ ಕಾರ್ ಗ್ಲಾಸ್ ಒಡೆದು ಪುಂಡಾಟ ಮೆರೆಯುತ್ತಿರುವ ಪುಂಡರು. ಹವಾ ಮೇಟೈಂನ್ ಮಾಡ್ಬೇಕು ಎಂಬ ಹುಚ್ಚಿನಿಂದ ಹುಚ್ಚಾಟ ಮೆರೆದಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಕಾರ್ ಗ್ಲಾಸ್ ಒಡೆದು ಸುಮ್ಮನಾಗದ ಈ ಗ್ಯಾಂಗ್.. ಮಾದನಾಯಕನಹಳ್ಳಿಯ ಮಾಗಡಿ ರೋಡ್ ಲಿಮಿಟ್ಸ್ ನಲ್ಲಿ ಕ್ಯಾಂಟರ್ ನಲ್ಲಿ ಮಲಗಿದ್ದ ಚಾಲಕನ ಮೇಲೆ ಲಾಂಗ್ ಬೀಸಿ ಪರಾರಿಯಾಗಿದ್ದಾರೆ.
ಮೊದಲಿಗೆ ಲಾರಿ ಗ್ಲಾಸ್ ಹೊಡೆದಿರೊ ಈ ಗ್ಯಾಂಗ್.. ಚಾಲಕ ಮಲಗಿರೋದನ್ನ ಗಮನಿಸಿ ಹಣಕ್ಕಾಗಿ ಬೆದರಿಸಿದ್ದಾರೆ..

ಹಣ ತೆಗೆದು ಕೊಡುವಷ್ಟರಲ್ಲಿ ಲಾಂಗ್ ಬೀಸಿ ಕೈ ಕಟ್ ಮಾಡಿದ್ದಾರೆ. ಬಳಿಕ ಮೊಬೈಲ್ ಹಾಗು 5 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ…
ಆ ಬಳಿಕ ದೊಡ್ಡಬಳ್ಳಾಪುರದ ಬಳಿ ಕೂಡ ಲಾಂಗ್ ಬೀಸಿರೊ ಪುಂಡರು … ಸಿಕ್ಕ ಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್ ನಿಂದ ಬೆದರಿಸಿ ಹಣ ದರೋಡೆ ಮಾಡಿದ್ದಾರೆ.
ಇದೀಗ ಆರೋಪಿಗಳಿಗಾಗಿ ಎಪಿನಗರ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಮತ್ತು ದೊಡ್ಡಬಳ್ಳಾಪುರ ಪೊಲೀಸ್ರಿಂದ ಹುಡುಕಾಟ ನಡೆಸಲಾಗುತ್ತಿದೆ.

ಬ್ಯಾಡರಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಕೇಸ್ ಗಳು ದಾಖಲಾಗಿದೆ. ಒಟ್ಟು ಹತ್ತಕ್ಕು ಹೆಚ್ಚು ಎಫ್ ಐ ಆರ್ ಗಳು ದಾಖಲಾಗಿವೆ.