ಅವರಿಬ್ಬರು ಸ್ನೇಹಿತರು. ನಿನ್ನೆ ರಾತ್ರಿ ಇಬ್ಬರು ಒಟ್ಟಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಶೆ ಏರಿದ ಮೇಲೆ ಯಾವುದೋ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಒಬ್ಬನ ಜೀವ ಹೋಗಿದೆ.
ಈ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನಂದ್ ಹಾಗೂ ರಂಗನಾಥ್ ಇಬ್ಬರು ಸ್ನೇಹಿತರು ಎಂದು ತಿಳಿದುಬಂದಿದೆ. ಆನಂದ್ ಎಂಬಾತ ರಂಗನಾಥ್ ತಲೆಗೆ ಕಲ್ಲಿನಿಂದ ಹೊಡೆದು, ತಲೆ ಜಜ್ಜಿ ಕೊಲೆಗೈದಿದ್ದಾನೆ ಎಂದು ಮಾಹಿತಿ ಒದಗಿಬಂದಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಮೂಲದ ರಂಗನಾಥ್ ಕೊಲೆಯಾದ ದುರ್ದೈವಿ. ಆನಂದ್ ಕೊಲೆ ಮಾಡಿದ ಆರೋಪಿ. ಕೊಲೆ ಮಾಡಿ ಆರೋಪಿ ಆನಂದ್ ಎಸ್ಕೇಪ್ ಆಗಿದ್ದಾನೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಆನಂದ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.