ಇಬ್ಬರು ಗಾಂಜಾ ಮಾರಾಟಗಾರರ ಬಂಧನ: ಬಂಧಿತರಿಂದ ಸುಮಾರು 60 ಸಾವಿರ ಮೌಲ್ಯದ 2 ಕೆಜಿ 200 ಗ್ರಾಂ‌. ಗಾಂಜಾ ವಶ‌

ಗಾಂಜಾವನ್ನು ಬ್ಯಾಗ್ ನಲ್ಲಿ ತಂದು ಗಿರಾಕಿಗಳಿಗೆ ಮಾರಾಟ ಮಾಡುವ ವೇಳೆ ಪೊಲೀಸರಿಗೆ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ದೇವನಹಳ್ಳಿ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಾಂಜಾ ಮಾರಾಟ ಮಾಡುವ ಗ್ಯಾಂಗ್ ಮೇಲೆ ಆಟ್ಯಾಕ್ ಮಾಡಿದ್ದಾರೆ.

ನಿತೀಶ್ ಕುಮಾರ್ (25) ಹಾಗೂ ವೆಂಕಟೇಶ್ (30) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 60 ಸಾವಿರ ಮೌಲ್ಯದ 2 ಕೆಜಿ 200 ಗ್ರಾಂ‌. ಗಾಂಜಾ ವಶ‌ಕ್ಕೆ ಪಡೆಯಲಾಗಿದೆ.

ನಿತೀಶ್ ಕುಮಾರ್ ಬಿಹಾರ ಮೂಲದವನಾಗಿದ್ದು, ದೇವನಹಳ್ಳಿಯಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದನು. ವೆಂಕಟೇಶ್ ದೇವನಹಳ್ಳಿ ನಿವಾಸಿಯಾಗಿರುತ್ತಾನೆ.

ದೇವನಹಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.

Leave a Reply

Your email address will not be published. Required fields are marked *