ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಚೇತನ್ ಹಾಗೂ ಅಭಿಷೇಕ್ ಬಂಧಿತ ಆರೋಪಿಗಳು. ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನೂ ಚೇತನ್ ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆ ನಿವಾಸಿ, ಅಭಿಷೇಕ್ ಮೂಲತಃ ಮಂಡ್ಯ ಜಿಲ್ಲೆಯವ. ಇಬ್ಬರೂ ಒಂದೇ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿದ್ದರಿಂದ ಸ್ನೇಹಿತರಾಗಿದ್ದಾರೆ. ಇಬ್ಬರಿಗೂ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ ಇತ್ತಂತೆ. ಆದ್ರೆ ಕೈಯಲ್ಲಿ ದುಡ್ಡಿಲ್ಲ, ಇದಕ್ಕಾಗಿ ಇಬ್ಬರು ಪ್ಲ್ಯಾನ್‌ ಮಾಡಿ ಚಿಕ್ಕಬಳ್ಳಾಪುರ ನಗರದ ಚೇತನ್ ಮನೆ ಪಕ್ಕದಲ್ಲೇ ಇರುವ ಮನೆಗಳಿಗೆ ಕನ್ನ ಹಾಕಿದ್ದರು.

ಚಾಮರಾಜಪೇಟೆಯ ಶಿಕ್ಷಕಿ ವಿನುತಾ ಹಾಗೂ ಶಾಂತಮ್ಮ ಎಂಬುವವರ ಮನೆಗಳಿಗೆ ನುಗ್ಗಿ ಚಿನ್ನಾಭರಣ ಸೇರಿ ಲಕ್ಷಾಂತರ ರೂಪಾಯಿ ನಗದು ದೋಚಿ ಇಬ್ಬರು ಮೋಜು ಮಸ್ತಿ ಮಾಡಿದ್ರು. ಆದರೆ ಈಗ ಚಿಕ್ಕಬಳ್ಳಾಪುರ ಪೊಲೀಸರು ಇಬ್ಬರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಅಂದಹಾಗೆ ಚೇತನ್ ಹಾಗೂ ಅಭಿಷೇಕ್ ಮೊದಲು ವಿನುತಾ ಅವರ ಮನೆಗೆ ನುಗ್ಗಿ ಮನೆಯ ಬಿರುವಿನಿಲ್ಲಿದ್ದ ಸರಿಸುಮಾರು 6 ಲಕ್ಷ 25 ಸಾವಿರ ಮೌಲ್ಯದ ಚಿನ್ನಾಭರಣಗಳನ್ನ ದೋಚಿದ್ರು. ತದನಂತರ ಇದೇ ಚಾಮರಾಜಪೇಟೆಯಲ್ಲಿ ಶಾಂತಮ್ಮ ಎಂಬುವವರ ಮನೆಗೆ ನುಗ್ಗಿ ಅವರ ಮನೆಯಲ್ಲೂ 85 ಸಾವಿರ ನಗದು, ಚಿನ್ನಾಭರಣಗಳನ್ನ ದೋಚಿದ್ರು.

Leave a Reply

Your email address will not be published. Required fields are marked *

error: Content is protected !!